ಗಾಂಧಿನಗರ: ರಸ್ತೆ ಬದಿಯಲ್ಲಿ ಮೊಟ್ಟೆ ಹಾಗೂ ಮಾಂಸಾಹಾರಿ ಖಾದ್ಯಗಳನ್ನು ಮಾರದಂತೆ ರಾಜ್‌ಕೋಟ್ ಮತ್ತು ವಡೋದರಾ ನಗರ ಪಾಲಿಕೆಗಳು ಮೌಖಿಕ ಆದೇಶ ಹೊರಡಿಸಿವೆ.
ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಗುಜರಾತ್ ಕಂದಾಯ ಸಚಿವ ರಾಜೇಂದ್ರ ತ್ರಿವೇದಿ, ‘ರಸ್ತೆ ಬದಿಯಲ್ಲಿ ಮಾಂಸಾಹಾರಿ ಖಾದ್ಯಗಳನ್ನು ಮಾರಾಟ ಮಾಡುವುದು ತಾತ್ಕಾಲಿಕ ಸ್ವರೂಪದ ಭೂಕಬಳಿಕೆಯ ಕೃತ್ಯ‘ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಇತರ ನಗರಗಳಲ್ಲೂ ಈ ರೀತಿಯ ಆದೇಶಗಳನ್ನು ಹೊರಡಿಸಬಹುದು ಎಂಬ ಮುನ್ಸೂಚನೆಯನ್ನೂ ಅವರು ನೀಡಿದ್ದಾರೆ.
ರಸ್ತೆ ಮತ್ತು ಕಟ್ಟಡ ಸಚಿವ ಪೂರ್ಣೇಶ್ ಮೋದಿ ಸಹ ರಸ್ತೆ ಬದಿಯಲ್ಲಿ ಮಾಂಸಾಹಾರಿ ಖಾದ್ಯಗಳನ್ನು ಮಾರುವುದರ ಬಗ್ಗೆ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.