ADVERTISEMENT

ಅಮೆರಿಕದ ಎರಡು ಸ್ಥಳಗಳಲ್ಲಿ ಗುಂಡಿನ ದಾಳಿ: 7 ಮಂದಿ ಸಾವು, ಆರೋಪಿ ವಶಕ್ಕೆ

ಏಜೆನ್ಸೀಸ್
Published 24 ಜನವರಿ 2023, 10:49 IST
Last Updated 24 ಜನವರಿ 2023, 10:49 IST
   

ಹಾಲ್ಫ್‌ ಮೂನ್‌ ಬೇ (ಅಮೆರಿಕ): ಅಮೆರಿಕದ ಎರಡು ಸ್ಥಳಗಳಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಸ್ಯಾನ್‌ ಫ್ರಾನ್ಸಿಸ್ಕೊದ ದಕ್ಷಿಣ ಕರಾವಳಿ ಭಾಗದಲ್ಲಿರುವ ಅಣಬೆ ಬೆಳೆಯುವ ಕೇಂದ್ರ ಹಾಗೂ ಟ್ರಕ್ ಕಂಪನಿವೊಂದರಲ್ಲಿ ದಾಳಿ ನಡೆದಿದೆ. ದಾಳಿ ನಡೆಸಿದ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

‘ಅಣಬೆ ಬೆಳೆಯುವ ಕೇಂದ್ರದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಹಾಗೂ ಟ್ರಕ್‌ ಕಂಪನಿ ಬಳಿ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ’ ಎಂದು ಸ್ಯಾನ್‌ ಮ್ಯಾಟೊ ಕೌಂಟಿ ಬೋರ್ಡ್‌ ಆಫ್‌ ಸುಪರ್‌ವೈಜರ್ಸ್‌ ಮುಖ್ಯಸ್ಥ ದಾವೆ ಪೈನ್‌ ಮಾಹಿತಿ ನೀಡಿದರು.

‘ದಾಳಿ ಸಂಬಂಧ 67 ವರ್ಷದ ಚೌನ್ಲಿ ಖಾವೊ ಅವರನ್ನು ಬಂಧಿಸಲಾಗಿದೆ. ಅಣಬೆ ಬೆಳೆಯುವ ಕೇಂದ್ರ ಅಥವಾ ಟ್ರಕ್‌ ಕಂಪನಿಯಲ್ಲಿ ಈತ ಕೆಲಸ ಮಾಡುತ್ತಿದ್ದ ಎಂದು ಅಂದಾಜಿಸಲಾಗಿದೆ’ ಎಂದ ಅವರು, ‘ಆತನೊಬ್ಬ ‘ಅತೃಪ್ತ ಕೆಲಸಗಾರ’ನಾಗಿದ್ದ’ ಎಂದರು.

ADVERTISEMENT

ಸಾರ್ವಜನಿಕರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿ, ಜನರನ್ನು ಕೊಲ್ಲುತ್ತಿರುವ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿದ್ದು, ಜನವರಿಯಲ್ಲಿ ನಡೆದ ಆರನೇ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.