ADVERTISEMENT

ಪಾಕಿಸ್ತಾನ | ಗ್ವಾದರ್ ಬಂದರಿನಲ್ಲಿ ಭಯೋತ್ಪಾದಕ ದಾಳಿ: 7 ಕಾರ್ಮಿಕರ ಸಾವು

ಪಿಟಿಐ
Published 9 ಮೇ 2024, 10:00 IST
Last Updated 9 ಮೇ 2024, 10:00 IST
<div class="paragraphs"><p>ಬಂದೂಕುಧಾರಿಗಳು (ಪ್ರಾತಿನಿಧಿಕ ಚಿತ್ರ)</p></div>

ಬಂದೂಕುಧಾರಿಗಳು (ಪ್ರಾತಿನಿಧಿಕ ಚಿತ್ರ)

   

ಕರಾಚಿ (ಪಾಕಿಸ್ತಾನ): ಬಂದರು ನಗರ ಗ್ವಾದರ್‌ನಲ್ಲಿ ಗುರುವಾರ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ಏಳು ಕಾರ್ಮಿಕರು ಮೃತಪಟ್ಟಿದ್ದಾರೆ.

'ಸುರ್ಬಂದರ್ ಪ್ರದೇಶದ ಗ್ವಾದರ್ ಬಂದರು ಬಳಿಯ ವಸತಿ ಪ್ರದೇಶದಲ್ಲಿ ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ 7 ಮಂದಿ ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ' ಎಂದು ಗ್ವಾದರ್ ಪೊಲೀಸ್ ಅಧಿಕಾರಿ ಮೊಹ್ಸಿನ್ ತಿಳಿಸಿದ್ದಾರೆ.

ADVERTISEMENT

ಮೃತರು ಹಾಗೂ ಗಾಯಗೊಂಡ ವ್ಯಕ್ತಿ ಈ ಪ್ರದೇಶದ ಕ್ಷೌರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಪಂಜಾಬ್‌ನ ಖನೇವಾಲ್ ಜಿಲ್ಲೆಗೆ ಸೇರಿದವರು. ಸದ್ಯ ಮೃತ ದೇಹಗಳನ್ನು ಗ್ವಾದರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಮಿಕರ ಹತ್ಯೆಯನ್ನು ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಖಂಡಿಸಿದ್ದಾರೆ. ಭಯೋತ್ಪಾದಕರು ಮತ್ತು ಅವರಿಗೆ ಸಹಾಯ ಮಾಡುವವರನ್ನು ಶಿಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಲೂಚಿಸ್ತಾನದ ಗೃಹ ಸಚಿವ ಮಿರ್ ಜಿಯಾ ಉಲ್ಲಾ ಲಾಂಗೌ ಕಾರ್ಮಿಕರ ಹತ್ಯೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಕಾರ್ಮಿಕರ ಹತ್ಯೆ ಹೇಡಿತನ. ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.