ADVERTISEMENT

ಡೆನ್ಮಾರ್ಕ್‌ನ ಶಾಪಿಂಗ್ ಮಾಲ್‌ನಲ್ಲಿ ಗುಂಡಿನ ದಾಳಿ, ಕನಿಷ್ಠ 3 ಸಾವು

ಘಟನೆ ಬೆನ್ನಲ್ಲೇ ಆರೋಪಿ ಬಂಧನ

ಏಜೆನ್ಸೀಸ್
Published 4 ಜುಲೈ 2022, 16:06 IST
Last Updated 4 ಜುಲೈ 2022, 16:06 IST
ಘಟನೆಯಲ್ಲಿ ಸಂತ್ರಸ್ತರ ಆಕ್ರಂದನ
ಘಟನೆಯಲ್ಲಿ ಸಂತ್ರಸ್ತರ ಆಕ್ರಂದನ   

ಕೊಪನ್‌ಹೇಗನ್ (ಎಪಿ): ಡೆನ್ಮಾರ್ಕ್‌ ರಾಜಧಾನಿಕೊಪನ್‌ಹೇಗನ್‌ನ ಶಾಪಿಂಗ್‌ ಮಾಲ್‌ವೊಂದಲ್ಲಿಬಂದೂಕುಧಾರಿಯೊಬ್ಬ ಭಾನುವಾರ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಮೂವರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.

ಈ ಸಂಬಂಧ ಸೋಮವಾರ 22 ವರ್ಷದ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ದಾಳಿಯು ಭಯೋತ್ಪಾದಕ ಸಂಬಂಧಿತ ಘಟನೆ ಅಲ್ಲ. ಏಕಾಂಗಿಯಾಗಿ ಬಂದ ವ್ಯಕ್ತಿ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.