ADVERTISEMENT

ಬಾಂಗ್ಲಾದೇಶ ಅಧ್ಯಕ್ಷರಾಗಿ ಮೊಹಮ್ಮದ್‌ ಶಹಾಬುದ್ಧೀನ್‌ ಚುಪ್ಪು ಹೆಸರು ನಾಮನಿರ್ದೇಶನ

ಪಿಟಿಐ
Published 12 ಫೆಬ್ರುವರಿ 2023, 14:12 IST
Last Updated 12 ಫೆಬ್ರುವರಿ 2023, 14:12 IST
ವೃತ್ತ ನ್ಯಾಯಮೂರ್ತಿ ಮೊಹಮ್ಮದ್‌ ಶಹಾಬುದ್ಧೀನ್‌ ಚುಪ್ಪು  (ಬಲಬದಿಯಲ್ಲಿರುವವರು)
ವೃತ್ತ ನ್ಯಾಯಮೂರ್ತಿ ಮೊಹಮ್ಮದ್‌ ಶಹಾಬುದ್ಧೀನ್‌ ಚುಪ್ಪು (ಬಲಬದಿಯಲ್ಲಿರುವವರು)   

ಢಾಕಾ: ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ, 74 ವರ್ಷದ ನಿವೃತ್ತ ನ್ಯಾಯಮೂರ್ತಿ ಮೊಹಮ್ಮದ್‌ ಶಹಾಬುದ್ಧೀನ್‌ ಚುಪ್ಪು ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಸಂಸತ್ತಿನಲ್ಲಿ ಬಹುಮತ ಹೊಂದಿರುವ ಆಡಳಿತಾರೂಢ ಅವಾಮಿ ಲೀಗ್ ಪಕ್ಷವು, ಚುಪ್ಪು ಅವರನ್ನು ದೇಶದ ಉನ್ನತ ಹುದ್ದೆಗೆ ನಾಮನಿರ್ದೇಶನ ಮಾಡಿದೆ. 350 ಸದಸ್ಯ ಬಲದ ಸಂಸತ್ತಿನಲ್ಲಿ ಅವಾಮಿ ಲೀಡ್‌ 305 ಸದಸ್ಯರನ್ನು ಹೊಂದಿದೆ.

ಚುಪ್ಪು ಅವರ ನಾಮನಿರ್ದೇಶನ ಪತ್ರವನ್ನು ಚುನಾವಣೆ ಆಯೋಗಕ್ಕೆ ಅವಾಮಿ ಲೀಗ್‌ ಸಲ್ಲಿಸಿದೆ ಎಂದು ಆಯೋಗದ ವಕ್ತಾರರು ತಿಳಿಸಿದ್ದಾರೆ. ಹಾಲಿ ಅಧ್ಯಕ್ಷ ಮೊಹಮ್ಮದ್‌ ಅಬ್ದುಲ್‌ ಹಮೀದ್‌ ಅವರ ಅಧಿಕಾರವಧಿಯ ಏಪ್ರಿಲ್‌ 24ರಂದು ಅಂತ್ಯಗೊಳ್ಳಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.