ADVERTISEMENT

ಶಾಂಘೈ: ಕೋವಿಡ್‌ ಪ್ರಕರಣಡಿಸ್ನಿ ರೆಸಾರ್ಟ್‌ ಬಂದ್, ಕಠಿಣ ನಿರ್ಬಂಧ ಹೇರಿಕೆ

ರಾಯಿಟರ್ಸ್
Published 1 ನವೆಂಬರ್ 2022, 12:39 IST
Last Updated 1 ನವೆಂಬರ್ 2022, 12:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಂಘೈ (ರಾಯಿಟರ್ಸ್): ಚೀನಾದ ಪ್ರಮುಖ ನಗರ ಶಾಂಘೈನಡಿಸ್ನಿ ರೆಸಾರ್ಟ್ ಪ್ರವಾಸಿಗರೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದರಿಂದತಾತ್ಕಾಲಿಕವಾಗಿ ರೆಸಾರ್ಟ್‌ ಅನ್ನು ಮುಚ್ಚಲಾಗಿದೆ. ಇಲ್ಲಿಗೆ ಭೇಟಿ ನೀಡಿದ್ದವರಿಗೆ ಮನೆಯಲ್ಲಿಯೇ ಉಳಿಯಲು ಸೂಚಿಸಲಾಗಿದೆ.

ಡಿಸ್ನಿ ರೆಸಾರ್ಟ್‌ಗೆ ಭೇಟಿ ನೀಡಿದ್ದ ಮಹಿಳೆಯೊಬ್ಬರಿಗೆ ಕೋವಿಡ್‌ ದೃಢಪಟ್ಟಿತ್ತು. ಹೀಗಾಗಿ ರೆಸಾರ್ಟ್ ಮುಚ್ಚಿದ್ದು, ಒಳಗಿದ್ದವರನ್ನು ತಪಾಸಣೆಗೆ ಒಳಪಡಿಸಿ ನೆಗೆಟಿವ್‌ ವರದಿ ಬಂದ ನಂತರವೇ ಹೊರಗೆ ಬಿಡಲಾಯಿತು.

ಚೀನಾದಲ್ಲಿ ಹೊಸದಾಗಿ ದಾಖಲಾದ ಪ್ರಕರಣಗಳ ಸಂಖ್ಯೆ 2,719. ಇದು, ಆಗಸ್ಟ್ 17ರ ನಂತರ ದಾಖಲಾದ ಅತ್ಯಧಿಕ ಪ್ರಕರಣ. ಇದರ ಹಿಂದೆಯೇ,ಪ್ರಮುಖ ನಗರಗಳಾದ ಗುವಾಂಗ್‌ಹೌ ಮತ್ತು ಡಾಂಗೊಂಗ್‌ನಲ್ಲಿ ಕಠಿಣ ನಿರ್ಬಂಧ ಕ್ರಮಗಳನ್ನು ಹೇರಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.