ADVERTISEMENT

ಶಾಂಘೈ: ಸೋಂಕಿತರಿಗೆ ಆರೈಕೆಗೆ ಮನೆ ಒಪ್ಪಿಸಲು ಪೊಲೀಸರ ಆದೇಶ –ಜನರ ಅಕ್ರೋಶ

ಏಜೆನ್ಸೀಸ್
Published 15 ಏಪ್ರಿಲ್ 2022, 14:00 IST
Last Updated 15 ಏಪ್ರಿಲ್ 2022, 14:00 IST
ಚೀನಾದ ಶಾಂಘೈ ನಗರದಲ್ಲಿ ಪೊಲೀಸರು ಪಿಪಿಇ ಕಿಟ್ ಧರಿಸಿ ಗಸ್ತು ತಿರುಗುತ್ತಿರುವುದು    –ಎಎಫ್‌ಪಿ ಚಿತ್ರ
ಚೀನಾದ ಶಾಂಘೈ ನಗರದಲ್ಲಿ ಪೊಲೀಸರು ಪಿಪಿಇ ಕಿಟ್ ಧರಿಸಿ ಗಸ್ತು ತಿರುಗುತ್ತಿರುವುದು    –ಎಎಫ್‌ಪಿ ಚಿತ್ರ   

ಶಾಂಘೈ (ಎಎಫ್‌‍ಪಿ): ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಕೋವಿಡ್‌ ಸೋಂಕಿತರ ಆರೈಕೆಗೆ ತಮ್ಮ ಮನೆಗಳನ್ನು ಒಪ್ಪಿಸುವಂತೆ ಆದೇಶಿಸಿರುವ ಪೊಲೀಸರ ವಿರುದ್ಧ ಅಲ್ಲಿನ ನಿವಾಸಿಗಳು ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರೊಂದಿಗೆ ಜಗಳವಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಗರದಲ್ಲಿ ದಿನನಿತ್ಯ 20 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು, ರೋಗಿಗಳ ಆರೈಕೆಗೆ 10 ಸಾವಿರ ಹಾಸಿಗೆ ಸಾಮರ್ಥ್ಯವುಳ್ಳ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಆದರೂ ಎಲ್ಲ ರೋಗಿಗಳಿಗೆ ಹಾಸಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು 39 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ಆದೇಶಿಸಲಾಗಿದೆ. ಇದರಿಂದ ಸ್ಥಳೀಯರು ಮತ್ತು ಪೊಲೀಸರ ನಡುವೆ ವಾಗ್ವಾದ ಆರಂಭಗೊಂಡಿದೆ.

ನಿವಾಸಿಗಳನ್ನು ಪೊಲೀಸರು ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದಕ್ಕಾಗಿಯೇ ಹಲವು ಮಂದಿಯನ್ನು ಬಂಧಿಸಲಾಗಿದೆ ಎಂಬುದು ವಿಡಿಯೊ ಒಂದರಿಂದ ತಿಳಿದು ಬಂದಿದೆ.

ADVERTISEMENT

ಶಾಂಘೈನಲ್ಲಿ ಮೂರನೇ ವಾರ ಲಾಕ್‌ಡೌನ್‌ ಮುಂದುವರಿದಿದ್ದು, ಜನರು ನಿರಂತರವಾಗಿ ಹತಾಶೆ ಮತ್ತು ಅಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಸೋಂಕು ನಿಯಂತ್ರಣದಲ್ಲಿ ಅಧಿಕಾರಿಗಳ ವೈಫಲ್ಯ, ಆಹಾರ ಕೊರತೆ, ಸಾಕು ಪ್ರಾಣಿಗಳನ್ನು ಕೊಲ್ಲುವ ಹಾಗೂ ಸೋಂಕಿತ ಮಕ್ಕಳನ್ನು ಪೋಷಕರಿಂದ ಬೇರ್ಪಡಿಸುವ ಆರೋಗ್ಯ ಕಾರ್ಯಕರ್ತರ ಅತಿರೇಕದ ಕ್ರಮ ಹಾಗೂ ಕಠಿಣನಿರ್ಬಂಧಗಳು ಜನರನ್ನು ಕಂಗಾಲಾಗಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.