ADVERTISEMENT

ಸಿಖ್ ಕುಟುಂಬದವರ ಹತ್ಯೆ: ಭಾರತ ಕಳವಳ

ಪಿಟಿಐ
Published 7 ಅಕ್ಟೋಬರ್ 2022, 15:36 IST
Last Updated 7 ಅಕ್ಟೋಬರ್ 2022, 15:36 IST
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹತ್ಯೆಗೀಡಾದ ಸಿಖ್ ಕುಟುಂಬದ ಸದಸ್ಯರ ಸ್ಮರಣಾರ್ಥ ಅಮೆರಿಕದ ಪೀಚ್ ಏವ್ ಗುರುದ್ವಾರದಲ್ಲಿ ಸಿಖ್ಖರ ಧಾರ್ಮಿಕ ಗುರು ಬಾಬಾಜಿ ಕರ್ಮಜಿತ್ ಸಿಂಗ್ ಅವರ ನೇತೃತ್ವದಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಲಾಯಿತು  –ಪಿಟಿಐ ಚಿತ್ರ 
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹತ್ಯೆಗೀಡಾದ ಸಿಖ್ ಕುಟುಂಬದ ಸದಸ್ಯರ ಸ್ಮರಣಾರ್ಥ ಅಮೆರಿಕದ ಪೀಚ್ ಏವ್ ಗುರುದ್ವಾರದಲ್ಲಿ ಸಿಖ್ಖರ ಧಾರ್ಮಿಕ ಗುರು ಬಾಬಾಜಿ ಕರ್ಮಜಿತ್ ಸಿಂಗ್ ಅವರ ನೇತೃತ್ವದಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಲಾಯಿತು  –ಪಿಟಿಐ ಚಿತ್ರ    

ನವದೆಹಲಿ: ‘ಕ್ಯಾಲಿಫೋರ್ನಿಯಾದಲ್ಲಿ ಭಾರತ ಮೂಲದ ಸಿಖ್ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ಸಂಗತಿಯು ಆಘಾತಕಾರಿಯಾದದು’ ಎಂದು ಭಾರತವು ಶುಕ್ರವಾರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

‘ಈ ಘಟನೆಯ ಬಗ್ಗೆ ನಮಗೆ ತಿಳಿದುಬಂದಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನಿರಂತರ ನಿಗಾ ವಹಿಸಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

‘ಹತ್ಯೆಯಾದ ಕುಟುಂಬದ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ಬೇಕಾದ ಎಲ್ಲಾ ಸಹಾಯವನ್ನು ಒದಗಿಸಲಾಗುವುದು. ಇದೊಂದು ಆಘಾತಕಾರಿ ಘಟನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ಪಂಜಾಬ್‌ನ ಹೋಶಿಯಾರ್‌ಪುರದ ಹರ್ಸಿಪಿಂಡ್‌ನವರಾದ ಸಿಖ್ ಕುಟುಂಬವನ್ನು ಸೋಮವಾರ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಕ್ಯಾಲಿಫೋರ್ನಿಯಾದಲ್ಲಿ ಅಪಹರಿಸಿದ್ದ. ಬಳಿಕ ಅಲ್ಲಿನ ಮರ್ಸಿಡ್‌ ಕೌಂಟಿಯ ತೋಟವೊಂದರಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದವು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.