ADVERTISEMENT

ಅಮೆರಿಕ: ಅಫ್ಗಾನಿಸ್ತಾನದ ಸಿಖ್‌, ಹಿಂದೂ ಸಮುದಾಯದವರ ಸ್ಥಳಾಂತರಕ್ಕೆ ಮನವಿ

ಪಿಟಿಐ
Published 18 ಆಗಸ್ಟ್ 2020, 8:38 IST
Last Updated 18 ಆಗಸ್ಟ್ 2020, 8:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿ ಅಳಿವಿನಂಚಿನಲ್ಲಿರುವ ಅಲ್ಪಸಂಖ್ಯಾತರಾದ ಸಿಖ್‌ ಮತ್ತು ಹಿಂದೂ ಸಮುದಾಯದ ಜನರನ್ನು ಯುದ್ಧ ಪೀಡಿತ ಪ್ರದೇಶದಿಂದ ಅಮೆರಿಕಕ್ಕೆ ಸ್ಥಳಾಂತರಗೊಳಿಸುವಂತೆ ಅಮೆರಿಕ ಸಂಸತ್ತಿನಲ್ಲಿ ನಿರ್ಣಯ ಮಂಡಿಸಲಾಗಿದೆ.

ಕಳೆದ ವಾರಸಂಸದೆ ಜಾಕಿ ಸ್ಪೀಯರ್‌ ಸೇರಿದಂತೆ 7 ಮಂದಿ ಸಂಸತ್ತಿನಲ್ಲಿ ಈ ನಿರ್ಣಯ ಮಂಡಿಸಿದ್ದಾರೆ. ಇದರಲ್ಲಿ ಅಫ್ಗಾನಿಸ್ತಾನದನಿರಾಶ್ರಿತ ಸಿಖ್‌ ಮತ್ತು ಹಿಂದೂ ಸಮುದಾಯ ಜನರಿಗೆಧಾರ್ಮಿಕ ಕಿರುಕುಳ, ತಾರತಮ್ಯ, ಭಯೋತ್ಪಾದನೆಯಿಂದ ರಕ್ಷಣೆ ನೀಡುವ ಬಗ್ಗೆ ಹೇಳಲಾಗಿದೆ.

ಅಫ್ಗಾನಿಸ್ತಾನದಲ್ಲಿ ಸಿಖ್‌ ಮತ್ತು ಹಿಂದೂ ಸಮುದಾಯ ಅಳಿವಿನಂಚಿನಲ್ಲಿದೆ. ಈ ಸಮುದಾಯದ ವಿರುದ್ಧ ಭಯೋತ್ಪಾದಕರ ದಾಳಿ, ಶೋಷಣೆಗಳು ಹೆಚ್ಚಾಗಿ ನಡೆಯುತ್ತಿವೆ.ಹಾಗಾಗಿ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಅನುಸಾರ ನಿರಾಶ್ರಿತರ ಪ್ರವೇಶ ಕಾರ್ಯಕ್ರಮದಡಿ ಅಫ್ಗಾನಿಸ್ತಾನದ ಸಿಖ್ಖರು ಮತ್ತು ಹಿಂದೂಗಳಿಗೆ ಅಮೆರಿಕದಲ್ಲಿ ಪುನರ್ವಸತಿ ಕಲ್ಪಿಸಿಕೊಡಲು ಅವಕಾಶ ನೀಡಬೇಕು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.