ADVERTISEMENT

ಪಾಕ್‌ನಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ: ವಿಶ್ವಸಂಸ್ಥೆ ಎದುರು ಮೌನ ಪ್ರತಿಭಟನೆ

ಏಜೆನ್ಸೀಸ್
Published 21 ಜೂನ್ 2020, 5:15 IST
Last Updated 21 ಜೂನ್ 2020, 5:15 IST
ವಿಶ್ವಸಂಸ್ಥೆ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವುದು.
ವಿಶ್ವಸಂಸ್ಥೆ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವುದು.   

ಜಿನಿವಾ (ಸ್ವಿಟ್ಜರ್ಲೆಂಡ್):ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಪಾಕಿಸ್ತಾನದಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಗಮನ ಸೆಳೆಯಲುವಿಶ್ವಸಂಸ್ಥೆಯ ಪ್ರಧಾನ ಕಚೇರಿ ಎದುರು ಶನಿವಾರಮೌನ ಪ್ರತಿಭಟನೆ ನಡೆಸಲಾಯಿತು.

ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ನರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರೀಕರಂತೆ ನಡೆಸಿಕೊಳ್ಳಲಾಗುತ್ತಿದೆ. ಆ ದೇಶದ ಸಂವಿಧಾನವು ಅಲ್ಪಸಂಖ್ಯಾತರನ್ನು ಸರ್ಕಾರದ ಉನ್ನತ ಕಚೇರಿಗಳಿಂದ ಕಾನೂನುಬದ್ಧವಾಗಿ ನಿರ್ಬಂಧಿಸಿದೆ. ಹೀಗಾಗಿ ಈ ಕುರಿತು ವಿಶ್ವಸಂಸ್ಥೆಯ ಗಮನ ಸೆಳೆಯಲು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರ ಪ್ರಕಾರ,ಚರ್ಚ್‌ನಂತಹ ಧಾರ್ಮಿಕ ಕೇಂದ್ರಗಳು ಸುಲಭವಾಗಿ ಗುರಿಯಾಗುತ್ತಿವೆ. ಕ್ರಿಸ್ಚಿಯನ್ನರು, ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಧರ್ಮದವರುದೇಶದಲ್ಲಿ ತಾರತಮ್ಯ, ಅಸಹಿಷ್ಣುತೆ ಮತ್ತು ಕಿರುಕುಳ ಅನುಭವಿಸುತ್ತಿದ್ದಾರೆ.

ADVERTISEMENT

ಅಪಹರಣ, ಲೈಂಗಿಕ ದೌರ್ಜನ್ಯ, ಬಲವಂತದ ಮದುವೆ ಮತ್ತು ಬಲವಂತದ ಮತಾಂತರವೂ ಪಾಕಿಸ್ತಾನದ ಕ್ರಿಶ್ಚಿಯನ್ ಸಮುದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ. ಧರ್ಮನಿಂದನೆ ವಿರೋಧಿ ಕಾನೂನುಗಳು ಕ್ರಿಶ್ಚಿಯನ್ನರ ವಿಚಾರದಲ್ಲಿ ಸರಿಯಾಗಿ ಜಾರಿಯಾಗುತ್ತಿಲ್ಲ ಎಂಬುದು ಪ್ರತಿಭಟನಾಕಾರರ ಅಳಲು.

ಸದ್ಯ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ 43ನೇ ಅಧಿವೇಶನ ನಡೆಯುತ್ತಿದೆ. ಈ ವೇಳೆ ಅಲ್ಪಸಂಖ್ಯಾತರ ರಕ್ಷಣೆಗೆ ಕಾನೂನುಗಳನ್ನು ರೂಪಿಸಬೇಕೆಂದು ಒತ್ತಾಯಿಸಲಾಗಿದೆ.

ಕ್ರಿಶ್ಚಿಯನ್ನರು ಕಿರುಕುಳ ಅನುಭವಿಸುತ್ತಿರುವ ವಿಶ್ವದ 50 ರಾಷ್ಟ್ರಗಳ ಪಟ್ಟಿಯನ್ನು ಇತ್ತೀಚೆಗೆ ಯುಎಸ್‌ಎ ವರ್ಲ್ಡ್‌ ವಾಚ್ ‌ಲಿಸ್ಟ್‌, 2020ಯಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.