ADVERTISEMENT

ಸಿಂಗಪುರದ ಇಬ್ಬರಲ್ಲಿ ಒಮೈಕ್ರಾನ್‌ನ ಉಪತಳಿ ಪತ್ತೆ

ಪಿಟಿಐ
Published 30 ಏಪ್ರಿಲ್ 2022, 12:54 IST
Last Updated 30 ಏಪ್ರಿಲ್ 2022, 12:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಂಗಪುರ:ಸಿಂಗಪುರದಇಬ್ಬರುವ್ಯಕ್ತಿಗಳಲ್ಲಿಒಮೈಕ್ರಾನ್‌ನಬಿಎ.2.12.1ಉಪತಳಿಪತ್ತೆಯಾಗಿದೆ.ಕೊರೊನಾ ಸೋಂಕು ಪತ್ತೆ ಮತ್ತು ಕೋವಿಡ್ ಪರಿಸ್ಥಿತಿ ಬಗ್ಗೆ ತೀವ್ರ ನಿಗಾ ವಹಿಸಲಾಗಿತ್ತು. ಈ ವೇಳೆ ಇಬ್ಬರಲ್ಲಿ ಈ ಸೋಂಕು ಇರುವುದು ಗೊತ್ತಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬಿಎ.2.12.1 ತಳಿಯು ವಿಶ್ವ ಆರೋಗ್ಯ ಸಂಸ್ಥೆಯ ಕಳವಳಕಾರಿ ವೈರಸ್‌ಗಳ ಪಟ್ಟಿಯಲ್ಲಿ ಇಲ್ಲ. ಅತಿ ವೇಗವಾಗಿ ಹರಡುವ ಒಮೈಕ್ರಾನ್‌ ಬಿಎ.2 ವೈರಸ್‌ನ ಉಪತಳಿಯಾದ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ವೇಗವಾಗಿ ವ್ಯಾಪಿಸುವ, ತೀವ್ರ ಅನಾರೋಗ್ಯ ಉಂಟು ಮಾಡುವುದಕ್ಕೆ ಸಂಬಂಧಿಸಿ ಯಾವುದೇ ಆಧಾರಗಳಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಸಿಂಗಪುರದಲ್ಲಿ 2,690 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಅವರೆಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಸೋಂಕು ಆರಂಭವಾದಾಗಿನಿಂದ ಈವರೆಗೆ ದೇಶದಲ್ಲಿ 11 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದು, 1,322 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.