ADVERTISEMENT

ಸಿಂಗಾಪುರ | ಡ್ರಗ್ಸ್‌ ಕಳ್ಳಸಾಗಣೆ: ಮಲೇಷ್ಯಾದ ವ್ತಕ್ತಿಗೆ ಗಲ್ಲು ಜಾರಿ

ಏಜೆನ್ಸೀಸ್
Published 25 ಸೆಪ್ಟೆಂಬರ್ 2025, 15:22 IST
Last Updated 25 ಸೆಪ್ಟೆಂಬರ್ 2025, 15:22 IST
.
.   

ಕ್ವಾಲಾಲಂಪುರ: ಸಿಂಗಾಪುರದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದ್ದ ಮಲೇಷ್ಯಾದ ವ್ಯಕ್ತಿಗೆ ಗುರುವಾರ ಗಲ್ಲು ಶಿಕ್ಷೆ ಜಾರಿ ಮಾಡಲಾಯಿತು. ಇದರೊಂದಿಗೆ ಈ ವರ್ಷದಲ್ಲಿ ಸಿಂಗಾಪುರದಲ್ಲಿ ಗಲ್ಲಿಗೇರಿದವರ ಸಂಖ್ಯೆ 11ಕ್ಕೆ ಏರಿಕೆಯಾಯಿತು.

ದಕ್ಷಿಣಾಮೂರ್ತಿ ಕಾಟಯ್ಯ (39) ಗಲ್ಲಿಗೆ ಗುರಿಯಾದ ವ್ಯಕ್ತಿ. ಸಿಂಗಾಪುರಕ್ಕೆ 45 ಗ್ರಾಂ. ಹೆರಾಯಿನ್‌ ಕಳ್ಳಸಾಗಣೆ ಮಾಡಿದ ಆರೋಪದಡಿ 2011ರಲ್ಲಿ ಇವರನ್ನು ಬಂಧಿಸಲಾಗಿತ್ತು. 2022ರಲ್ಲೇ ದಕ್ಷಿಣಾಮೂರ್ತಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕಿತ್ತು. ಆದರೆ, ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿದಿತ್ತು. ಆಗಸ್ಟ್‌ನಲ್ಲಿ ಅಪರಾಧಿಯ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಗುರುವಾರ ಮಧ್ಯಾಹ್ನ ಗಲ್ಲಿಗೇರಿಸುವ ಪ್ರಕ್ರಿಯೆ ನಡೆಸಲಾಯಿತು. 2 ಗಂಟೆಗಳೊಳಗೆ ಮೃತದೇಹವನ್ನು ಕೊಂಡೊಯ್ಯುವಂತೆ ದಕ್ಷಿಣಾಮೂರ್ತಿ ಕುಟುಂಬಕ್ಕೆ ಮಾಹಿತಿ ನೀಡಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.