ಸಿಂಗಪುರ: ಸಿಂಗಪುರ ಪ್ರಧಾನಿಯಾಗಿ ಸುಮಾರು 20 ವರ್ಷ ಆಡಳಿತ ನಡೆಸಿರುವ ಲೀ ಸಿಯೆನ್ ಲೂಂಗ್ ಅವರು ಮೇ 15ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸೋಮವಾರ ಪ್ರಕಟಿಸಿದ್ದಾರೆ. ಹಾಲಿ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಮುಂದಿನ ಪ್ರಧಾನಿಯಾಗಿ ಪದೋನ್ನತಿ ಹೊಂದಲಿದ್ದಾರೆ ಎಂದು ವರದಿಯಾಗಿದೆ.
2004ರ ಆಗಸ್ಟ್ 4ರಂದು ಸಿಂಗಪುರದ ಮೂರನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಲೀ ಅವರು, ನಾಯಕತ್ವ ಬದಲಾವಣೆಯು ಯಾವುದೇ ದೇಶಕ್ಕೆ ಮಹತ್ವದ ಗಳಿಗೆಯಾಗಿದೆ ಎಂದು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
‘ಈ ವರ್ಷ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಳೆದ ವರ್ಷದ ನವೆಂಬರ್‌ನಲ್ಲೇ ಘೋಷಣೆ ಮಾಡಿದ್ದೇನೆ. ಈ ಪ್ರಕಾರ 2024ರ ಮೇ 15ರಂದು ಪ್ರಧಾನಿ ಸ್ಥಾನ ತ್ಯಜಿಸಲಿದ್ದೇನೆ. ಅದೇ ದಿನ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಮುಂದಿನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ’ ಎಂದು ಲೀ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.