ಜೈಲು (ಪ್ರಾತಿನಿಧಿಕ ಚಿತ್ರ)
ಸಿಂಗಪುರ: ಇಸ್ಲಾಂ ವಿರೋಧಿ ವಿಷಯಗಳನ್ನು ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಮೂಲಕ ಇನ್ನೊಬ್ಬನ ಹೆಸರಿನಲ್ಲಿ ಪ್ರಕಟಿಸಿದ್ದಕ್ಕಾಗಿ ಚುವಾ ವಾಂಗ್ ಚೆಂಗ್ ಎಂಬಾತನಿಗೆ ಸಿಂಗಪುರದ ನ್ಯಾಯಾಲಯವೊಂದು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಚೆಂಗ್ ತಾನು ಇಷ್ಟಪಡದ ವ್ಯಕ್ತಿಯೊಬ್ಬನ ಹೆಸರಿನಲ್ಲಿ ಖಾತೆಯನ್ನು ತೆರೆದು, ಇಸ್ಲಾಂ ಧರ್ಮಕ್ಕೆ ಅಗೌರವ ತೋರುವಂತಹ ವಿಡಿಯೊಗಳನ್ನು ಆ ಖಾತೆಯಿಂದ ಪೋಸ್ಟ್ ಮಾಡಿದ್ದ ಎಂದು ‘ಚಾನಲ್ ನ್ಯೂಸ್ ಏಷ್ಯಾ’ ವರದಿ ಮಾಡಿದೆ.
ಸಿಂಗಪುರದ ಇಸ್ಲಾಮಿಕ್ ಧಾರ್ಮಿಕ ಮಂಡಳಿಯ ಪ್ರಕಾರ, ಈತ ಹಂಚಿಕೊಂಡಿದ್ದ ಒಂದು ವಿಡಿಯೊ ಆಧಾರವಿಲ್ಲದ ಹೇಳಿಕೆಗಳನ್ನು ಹೊಂದಿತ್ತು, ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಅಂಶಗಳನ್ನು ಹೊಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.