ADVERTISEMENT

ಸಿಂಗಪುರ: ಕೋವಿಡ್‌ ಮಧ್ಯದಲ್ಲೂ ಚುನಾವಣೆ

ಪಿಟಿಐ
Published 10 ಜುಲೈ 2020, 9:29 IST
Last Updated 10 ಜುಲೈ 2020, 9:29 IST
ಸಿಂಗಪುರದಲ್ಲಿ ಮತದಾನಕ್ಕಾಗಿ ಸಾಲುಗಟ್ಟಿ ನಿಂತಿರುವ ಜನರು –ರಾಯಿಟರ್ಸ್‌ ಚಿತ್ರ
ಸಿಂಗಪುರದಲ್ಲಿ ಮತದಾನಕ್ಕಾಗಿ ಸಾಲುಗಟ್ಟಿ ನಿಂತಿರುವ ಜನರು –ರಾಯಿಟರ್ಸ್‌ ಚಿತ್ರ   

ಸಿಂಗಪುರ: ಕೋವಿಡ್‌–19 ಪಿಡುಗಿನ ಮಧ್ಯದಲ್ಲೂ ಶುಕ್ರವಾರ ಸಿಂಗಪುರದಲ್ಲಿ ಚುನಾವಣೆಗಳು ನಡೆದಿವೆ. ಇಲ್ಲಿ ಆಡಳಿತಾರೂಢ ಪೀಪಲ್ಸ್‌ ಆ್ಯಕ್ಷನ್‌ ಪಾರ್ಟಿ (ಪಿಎಪಿ) ಪುನಃ ಅಧಿಕಾರ ಹಿಡಿಯುವ ನಿರೀಕ್ಷೆ ಇದ್ದರೂ ಕೋವಿಡ್‌ ನಿರ್ವಹಣೆಯಲ್ಲಿ ಪ್ರಧಾನಿ ಲೀ ಸೆನ್ ಲೂಂಗ್‌ ಕೈಗೊಂಡ ಕ್ರಮಗಳಿಗೆ ಜನರು ಚುನಾವಣೆಯ ಮೂಲಕ ಉತ್ತರ ನೀಡಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಕೋವಿಡ್‌ ಕಾರಣಕ್ಕೆ ಮತದಾನದ ಸಂದರ್ಭದಲ್ಲಿ ಗರಿಷ್ಠ ಎಚ್ಚರ ವಹಿಸಲಾಗಿದೆ. ಜನರು ಗ್ಲೌಸ್‌, ಮುಖಗವಸು ಧರಿಸಿ, ಅಂತರ ಕಾಯ್ದುಗೊಳ್ಳುವ ಮೂಲಕ ಮತದಾನ ನಡೆಸಿದ್ದಾರೆ. ಹಿರಿಯ ನಾಗರಿಕರಿಗೆ ಸೋಂಕಿನಿಂದ ಹೆಚ್ಚು ಅಪಾಯ ಸಂಭವಿಸುತ್ತದೆ ಎಂಬ ಕಾರಣಕ್ಕೆ ಮುಂಜಾನೆಯ ಅವಧಿಯಲ್ಲಿ 65 ಮೀರಿದವರಿಗೆ ಮಾತ್ರ ಮತದಾನ ಮಾಡಲು ಅವಕಾಶ ನೀಡಲಾಗಿದೆ.

ಸಿಂಗಪುರದಲ್ಲಿ ಮತದಾನ ಕಡ್ಡಾಯವಾಗಿರುವುದರಿಂದ 2.65 ಲಕ್ಷ ಜನರು ಮತ ಚಲಾಯಿಸಲಿದ್ದಾರೆ. ಕೋವಿಡ್‌ನಿಂದಾಗಿ ಸಿಂಗಪುರದ ಅರ್ಥವ್ಯವಸ್ಥೆಯು ಈವರೆಗೆ ಕಂಡರಿಯದ ಹಿಂಜರಿಕೆ ಅನುಭವಿಸುತ್ತಿದೆ. ಆಡಳಿತಾರೂಢ ಪಿಎಪಿಯು ದೇಶದ ಅರ್ಥವ್ಯವಸ್ಥೆಯನ್ನು ನಿರ್ವಹಿಸುವುದರಲ್ಲಿ ಎಡವಿದೆ ಎಂಬ ಆರೋಪಗಳಿವೆ. ಆದರೆ, 1950ರಿಂದ ಈವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಪಿಎಪಿ ಗೆಲುವು ಸಾಧಿಸುತ್ತಲೇ ಬಂದಿದೆ.

ADVERTISEMENT

ಈ ಬಾರಿ ಈ ಪಕ್ಷವು ಭಾರತ ಮೂಲದ ಯಾರಿಗೂ ಟಿಕೆಟ್‌ ನೀಡಲಿಲ್ಲ. ಆದರೆ, ವಿರೋಧಪಕ್ಷಗಳು ಭಾರತ ಮೂಲದ ಸುಮಾರು 12ಕ್ಕೂ ಹೆಚ್ಚು ಮಂದಿಯನ್ನು ಕಣಕ್ಕಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.