ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾದ ಖ್ಯಾತ ಗಾಯಕ ಕ್ರಿಸ್ ಬ್ರೌನ್ ವಿರುದ್ಧ ಅತ್ಯಾಚಾರದ ಮೊಕದ್ದಮೆ ಹೂಡಲಾಗಿದ್ದು, ಫ್ಲೋರಿಡಾದ ವಿಹಾರ ನೌಕೆಯೊಂದರಲ್ಲಿ ತನಗೆ ಅಮಲೇರಿಸುವ ಪಾನೀಯ ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಗಾಯಕನಿಂದ 20 ಮಿಲಿಯನ್ ಡಾಲರ್ ಪರಿಹಾರವನ್ನು ಅವರು ಕೋರಿದ್ದಾರೆ.
ಗುರುವಾರ ದಾಖಲಾಗಿರುವ ಸಿವಿಲ್ ಮೊಕದ್ದಮೆಯ ಪ್ರಕಾರ, ನೃತ್ಯ ಸಂಯೋಜಕಿ, ನರ್ತಕಿ, ಮಾಡೆಲ್ ಮತ್ತು ಸಂಗೀತ ಕಲಾವಿದೆಯಾಗಿದ್ದ ಮಹಿಳೆಯನ್ನು ಬ್ರೌನ್ ಅವರು ನೌಕೆಗೆ ಆಹ್ವಾನಿಸಿದ್ದರು.
ಅಲ್ಲಿ ಆವರು ನನಗೆ ನೀಡಿದ್ದ ಪಾನೀಯವು ದಿಗ್ಭ್ರಮೆಗೊಳಿಸಿತು ಮತ್ತು ದೈಹಿಕವಾಗಿ ಅಸ್ಥಿರಗೊಳಿಸಿತು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ನನ್ನ ವಿರೋಧದ ನಡುವೆಯೂ ಬ್ರೌನ್ ನನ್ನನ್ನು ಮಲಗುವ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದರು ಎಂದು ಮಹಿಳೆ ಆರೋಪಿಸಿದ್ದಾರೆ
‘ಸಂತ್ರಸ್ತೆ ಜೇನ್ ಡೋ ಅನುಭವಿಸಿದ ಅತ್ಯಂತ ನೋವಿನ ಆಘಾತಕಾರಿ ಘಟನೆ ನಮ್ಮ ಆತ್ಮಸಾಕ್ಷಿಯನ್ನು ಆಘಾತಗೊಳಿಸಿದವು ಮತ್ತು ನಮ್ಮೆಲ್ಲರನ್ನು ಭಯಭೀತಗೊಳಿಸುತ್ತವೆ’ಎಂದು ಲಾಸ್ ಏಂಜಲೀಸ್‌ನಲ್ಲಿ ದಾಖಲಾದ ಮೊಕದ್ದಮೆಯಲ್ಲಿ ವಕೀಲರು ವಿವರಿಸಿದ್ದಾರೆ.
‘ನಿಮ್ಮ ದೌರ್ಜನ್ಯ ಮಿತಿಮೀರಿದೆ ಎಂದು ಆರೋಪಿ ಕ್ರಿಸ್ ಬ್ರೌನ್‌ಗೆ ಸಂದೇಶ ಕಳುಹಿಸುವ ಸಮಯ ಬಂದಿದೆ’ಎಂದು ಬರೆಯಲಾಗಿದೆ.
ತಮ್ಮ ವಿರುದ್ಧ ಅತ್ಯಾಚಾರದ ದೂರು ದಾಖಲಾಗುತ್ತಿದ್ದಂತೆ ಗ್ರ್ಯಾಮಿ ಪ್ರಶಸ್ತಿ ವಿಜೇತ ಬ್ರೌನ್ ಇನ್‌ಸ್ಟಾಗ್ರಾಮ್‌ನಲ್ಲಿ ನೀಲಿ ಕ್ಯಾಪ್ ಎಮೋಜಿ ಪೋಸ್ಟ್ ಮಾಡಿದ್ದಾರೆ. ನೀಲಿ ಕ್ಯಾಪ್ ಎಮೋಜಿಯನ್ನು ಅಸತ್ಯವನ್ನು ಸೂಚಿಸಲು ಬಳಸಲಾಗುತ್ತದೆ.
2009 ರಲ್ಲಿ, ಬ್ರೌನ್ ತನ್ನ ಗೆಳತಿ, ಸಹ ಗಾಯಕ ರಿಹಾನ್ನಾ ಅವರನ್ನು ಥಳಿಸಿದ ಆರೋಪ ಕೇಳಿಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.