ADVERTISEMENT

ಅಲಾಸ್ಕಾದ ಪರ್ವತ ಪ್ರದೇಶದಲ್ಲಿ ವಿಮಾನ ಪತನ: ಪೈಲಟ್‌ ಸೇರಿ 6 ಮಂದಿ ಸಾವು

ರಾಯಿಟರ್ಸ್
Published 6 ಆಗಸ್ಟ್ 2021, 7:03 IST
Last Updated 6 ಆಗಸ್ಟ್ 2021, 7:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಆಂಕರೇಜ್: ‘ಅಲಾಸ್ಕಾದ ಆಗ್ನೇಯ ಭಾಗದ ಪರ್ವತ ಪ್ರದೇಶದಲ್ಲಿ ವಿಮಾನವೊಂದು ಗುರುವಾರ ಪತನಗೊಂಡಿದ್ದು, ಇದರಲ್ಲಿ ಪೈಲಟ್ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

ಹಾಲೆಂಡ್‌ ಅಮೆರಿಕ ಲೈನ್‌ ಹಡಗಿನ ಐವರು ಪ್ರಯಾಣಿಕರನ್ನು ‘ಡಿ ಹಾವಿಲ್‌ಲ್ಯಾಂಡ್‌ ಬಿವೇರ್‌’ ವಿಮಾನದ ಮೂಲಕ ಕೆಟ್ಚಿಕನ್‌ನ ಬಂದರು ನಗರಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ವಿಮಾನವು ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ಯಾರೂ ಕೂಡ ಬದುಕ್ಕುಳಿದಿಲ್ಲ ಎಂದು ಅವರು ಹೇಳಿದರು.

ಅಮೆರಿಕದ ಕರಾವಳಿ ಪಡೆ, ಅರಣ್ಯ ಸೇವೆ ಸೇರಿದಂತೆ ಇತರೆ ಸಂಸ್ಥೆಗಳು ಶೋಧ ಕಾರ್ಯಾಚರಣೆ ನಡೆಸಿ, ವಿಮಾನದ ಅವಶೇಷಗಳು ಮತ್ತು ಮೃತದೇಹಗಳು ಪತ್ತೆ ಹಚ್ಚಿವೆ ಎಂದುಅಲಾಸ್ಕಾ ಸ್ಟೇಟ್ ಟ್ರೂಪರ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಈ ಅಪಘಾತದ ಕುರಿತು ತನಿಖೆ ನಡೆಸಲು ತಂಡವೊಂದನ್ನು ಕಳುಹಿಸಲಾಗಿದೆ’ ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.