ADVERTISEMENT

ಜೀಪ್‌ ಅಪಘಾತ: ನೇಪಾಳ ಪ್ರವಾಸಕ್ಕೆ ತೆರಳಿದ್ದ ಆರು ಮಂದಿ ಭಾರತೀಯರಿಗೆ ಗಾಯ

ಪಿಟಿಐ
Published 2 ಜೂನ್ 2024, 11:52 IST
Last Updated 2 ಜೂನ್ 2024, 11:52 IST
<div class="paragraphs"><p>ಅಪಘಾತ –ಪ್ರಾತಿನಿಧಿಕ ಚಿತ್ರ</p></div>

ಅಪಘಾತ –ಪ್ರಾತಿನಿಧಿಕ ಚಿತ್ರ

   

ಕಠ್ಮಂಡು: ನೇಪಾಳದ ಚಿತ್ವಾನ್‌ ಜಿಲ್ಲೆಯ ದರಾಯ್‌ ಸರೋವರದ ಬಳಿ ಭಾನುವಾರ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪ್‌ ಅಪಘಾತಕ್ಕೆ ಒಳಗಾಗಿ ಆರು ಮಂದಿ ಭಾರತೀಯರು ಗಾಯಗೊಂಡಿದ್ದಾರೆ.

ಗಾಯಗೊಂಡ ಭಾರತೀಯರು ಮುಂಬೈ ಮೂಲದವರು. ಎಲ್ಲರೂ 60 ವರ್ಷ ಮೇಲ್ಪಟ್ಟವರು. ಅವರನ್ನು ರಾಮಚಂದ್ರ ಯಾದವ್‌, ಸುದೇಶ್‌ ಶಂಕರ್‌ ಖಾದಿಯಾ, ಪಂಕಜ್‌ ಗೋಪೇಶ್ವರ್‌, ವೈಶಾಲಿ ಗೋಪೇಶ್ವರ್‌, ಸುಶ್ಮಿತಾ ಮತ್ತು ವಿಜಯ್‌ ಎಂದು ಗುರುತಿಸಲಾಗಿದೆ.

ADVERTISEMENT

ಪ್ರವಾಸಿಗರು ಚಿತ್ವಾನ್‌ ರಾಷ್ಟ್ರೀಯ ಉದ್ಯಾನವನಕ್ಕೆ ಸಫಾರಿಗೆಂದು ತೆರಳುತ್ತಿದ್ದರು ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ

ಗಾಯಾಳುಗಳು ಭರತ್‌ಪುರ ಮತ್ತು ರತ್ನಾನಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೀಪ್‌ ಮತ್ತು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.