ADVERTISEMENT

ಇರಾನ್: ಕಣಿವೆಗೆ ಉರುಳಿದ ಮಿನಿ ಬಸ್– 16 ಸಾವು

ಪಿಟಿಐ
Published 2 ಸೆಪ್ಟೆಂಬರ್ 2021, 11:45 IST
Last Updated 2 ಸೆಪ್ಟೆಂಬರ್ 2021, 11:45 IST
ಇರಾನ್ ಪ್ರಾತಿನಿಧಿಕ ಚಿತ್ರ: ಎಎಫ್‌ಪಿ
ಇರಾನ್ ಪ್ರಾತಿನಿಧಿಕ ಚಿತ್ರ: ಎಎಫ್‌ಪಿ   

ತೆಹ್ರಾನ್: ಪಶ್ಚಿಮ ಇರಾನ್‌ನಲ್ಲಿ ಮಿನಿ ಬಸ್ ಕಣಿವೆಗೆ ಉರುಳಿದ ಪರಿಣಾಮ 16 ಮಂದಿ ಸಾವಿಗೀಡಾಗಿದ್ದಾರೆ ಎಂದು ಇರಾನ್‌ನ ಸ್ಟೇಟ್ ಟಿವಿ ವರದಿ ಮಾಡಿದೆ.

ಕೊರ್ದೆಸ್ತಾನ್ ವಲಯದ ಕುರ್ದಿಶ್ ಪ್ರಾಂತ್ಯದಲ್ಲಿ ಅಪಘಾತ ಸಂಭವಿಸಿದೆ ಎಂದು ವರದಿ ಹೇಳಿದೆ.

ಗಾಯಗೊಂಡ 13 ಜನರನ್ನು ಸನಂದಾಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಇರಾನ್‌ನ ತುರ್ತು ನಿರ್ವಹಣಾ ಸಂಘಟನೆಯ ಹೆಲಿಕಾಪ್ಟರ್, ಬಸ್ ಮತ್ತು 6 ಆಂಬುಲೆನ್ಸ್‌ಗಳನ್ನು ತಲುಪಿಸಲಾಗಿದೆ.

ADVERTISEMENT

ಅಪಘಾತಕ್ಕೆ ಕಾರಣವೇನೆಂಬ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಘಟನೆ ಕುರಿತಂತೆ ತನಿಖೆ ನಡೆಯುತ್ತಿದೆ.

ಇರಾನ್‌ನಲ್ಲಿ ಪ್ರತಿ ವರ್ಷ 17,000ಕ್ಕೂ ಹೆಚ್ಚು ಮಂದಿ ರಸ್ತೆ ಸಂಬಂಧಿತ ಅಪಘಾತಗಳಲ್ಲಿ ಸಾವಿಗೀಡಾಗುತ್ತಿದ್ದು, ಇರಾನ್ ಪ್ರಪಂಚದ ಅತ್ಯಂತ ಕೆಟ್ಟ ಟ್ರಾಫಿಕ್ ಸುರಕ್ಷತಾ ದಾಖಲೆಗಳನ್ನು ಹೊಂದಿದೆ.

ಅಸುರಕ್ಷಿತ ರಸ್ತೆ ಪ್ರಯಾಣ ಮತ್ತು ಅಸಮರ್ಪಕ ತುರ್ತು ಸೇವೆಯಿಂದ ಇರಾನ್ ವಿಶ್ವದಲ್ಲೇ ಕುಖ್ಯಾತಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.