ADVERTISEMENT

ರಾಕೆಟ್ ದಾಳಿ: ರಷ್ಯಾದ 63 ಯೋಧರು ಸಾವು

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 22:50 IST
Last Updated 3 ಜನವರಿ 2023, 22:50 IST
   

ಕೀವ್: ಇರಾನ್‌ ನಿರ್ಮಿತ ಸ್ಫೋಟಕ ಡ್ರೋನ್‌ ಬಳಸಿ ಉಕ್ರೇನ್‌ ಮೇಲೆ ದಾಳಿ ತೀವ್ರಗೊಳಿಸಲು ರಷ್ಯಾ ಸಿದ್ಧತೆ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ.

ಉಕ್ರೇನ್ ಸೇನೆ ನಡೆಸಿದ ದಾಳಿಯಲ್ಲಿ ರಷ್ಯಾದ 63 ಯೋಧರು ಸತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಒತ್ತಡ ಕ್ರಮದ ಭಾಗವಾಗಿ ರಷ್ಯಾ ಡ್ರೋನ್‌ ದಾಳಿಗೆ ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಉಕ್ರೇನ್‌ನ ಪಡೆಗಳು ಡೊನೆಟ್ಸ್ಕ್‌
ವಲಯದಲ್ಲಿ ರಷ್ಯಾದ ಯೋಧರಿದ್ದ ನೆಲೆಯ ಮೇಲೆ ರಾಕೆಟ್‌ ದಾಳಿ ನಡೆಸಿದ್ದು 63 ಜನರು ಮೃತಪಟ್ಟಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ADVERTISEMENT

ಅನಧಿಕೃತ ಮೂಲಗಳ ಪ್ರಕಾರ, ಹೆಚ್ಚಿನ ಸಂಖ್ಯೆಯ ಯೋಧರು ಮೃತಪಟ್ಟಿದ್ದಾರೆ. ಯುದ್ಧ ಆರಂಭವಾದ ನಂತರ ಕಳೆದ 10 ತಿಂಗಳಲ್ಲಿ ರಷ್ಯಾ ಸೇನೆ ಗುರಿಯಾಗಿಸಿ ನಡೆದಿರುವ ಅತಿದೊಡ್ಡ ದಾಳಿ ಇದಾಗಿದೆ. ಆದರೆ, ಉಕ್ರೇನ್‌ ಸೇನೆ ರಾಕೆಟ್‌ ದಾಳಿ ನಡೆದ ತಾಣದಲ್ಲಿ ರಷ್ಯಾದ 400ಕ್ಕೂ ಹೆಚ್ಚು ಯೋಧರಿದ್ದರು. ಸುಮಾರು 300 ಮಂದಿ ಗಾಯಗೊಂಡಿದ್ದಾರೆ ಎಂದಿದೆ.ರಾಕೆಟ್‌ ದಾಳಿಯಿಂದ ಕಟ್ಟಡವೊಂದು ಬಹುತೇಕ ನಾಶಗೊಂಡಿರುವುದು ಉಪಗ್ರಹ ಚಿತ್ರದಲ್ಲಿಯೂ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.