ADVERTISEMENT

‘ಅಮ್ಮನ ಹೆಸರಿನಲ್ಲಿ ಮರ’: ಅಭಿಯಾನಕ್ಕೆ ಸ್ಲೋವಾಕಿಯಾ ಬೆಂಬಲ

ಪಿಟಿಐ
Published 11 ಏಪ್ರಿಲ್ 2025, 15:17 IST
Last Updated 11 ಏಪ್ರಿಲ್ 2025, 15:17 IST
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪೀಟರ್‌ ಪೆಲಿಗ್ರಿನ್‌ ಅವರು ನಿತ್ರಾದಲ್ಲಿ ಲಿಂಡನ್‌ ಸಸಿ ನೆಟ್ಟರು –ಪಿಟಿಐ ಚಿತ್ರ
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪೀಟರ್‌ ಪೆಲಿಗ್ರಿನ್‌ ಅವರು ನಿತ್ರಾದಲ್ಲಿ ಲಿಂಡನ್‌ ಸಸಿ ನೆಟ್ಟರು –ಪಿಟಿಐ ಚಿತ್ರ   

ಬ್ರಟಿಸ್ಲಾವಾ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ‘ಏಕ್‌ ಪೇಡ್‌ ಮಾ ಕೆ ನಾಮ್‌’ (ಅಮ್ಮನ ಹೆಸರಿನಲ್ಲಿ ಒಂದು ಮರ) ಅಭಿಯಾನಕ್ಕೆ ಸ್ಲೋವಾಕಿಯಾ ಗಣರಾಜ್ಯದ ಅಧ್ಯಕ್ಷ ಪೀಟರ್‌ ಪೆಲಿಗ್ರಿನ್‌ ಅವರೂ ಬೆಂಬಲ ಪ್ರಕಟಿಸಿದ್ದಾರೆ. 

ಸ್ಲೋವಾಕಿಯಾ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಮೋದಿ ಕರೆ ನೀಡಿರುವ ಅಭಿಯಾನದ ಬಗ್ಗೆ ಗುರುವಾರ ಕಾರ್ಯಕ್ರಮವೊಂದರಲ್ಲಿ ವಿವರಿಸಿದರು. ಬಳಿಕ ಪೆಲಿಗ್ರಿನ್‌, ‘ದೇಶದಲ್ಲೂ ಇಂಥ ಉಪಕ್ರಮ ಅಳವಡಿಸಲಾಗುವುದು’ ಎಂದು ಹೇಳಿದರು.

ಸ್ಲೋವಾಕಿಯಾದ ನಿತ್ರಾ ನಗರದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಉಭಯ ನಾಯಕರು, ಉದ್ಯಾನವನವೊಂದರಲ್ಲಿ ಸ್ಲೋವಾಕಿಯಾದ ರಾಷ್ಟ್ರೀಯ ಮರವಾದ ‘ಲಿಂಡನ್‌ ಸಸಿ’ ನೆಟ್ಟರು.

ADVERTISEMENT

ಭಾರತದಲ್ಲಿ ಹೂಡಿಕೆಗೆ ಕರೆ: ’ಭಾರತ ಪ್ರಗತಿಪಥಯಲ್ಲಿ ಸಾಗುತ್ತಿದೆ. ಭಾರತದಲ್ಲಿ ಹೂಡಿಕೆ ಮೂಲಕ ‘ಮೇಕ್‌ ಇನ್‌ ಇಂಡಿಯಾ’ ಕಾರ್ಯಕ್ರಮದಲ್ಲಿ ಕೈಜೋಡಿಸಿ‘ ಎಂದು ಸ್ಲೋವಾಕಿಯಾದ ಉದ್ಯಮಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಇದೇ ವೇಳೆ ಆಹ್ವಾನಿಸಿದರು.

ಇಲ್ಲಿನ ಜಾಗ್ವಾರ್ ಲ್ಯಾಂಡ್‌ ರೋವರ್‌ ಘಟಕಕ್ಕೆ ಭೇಟಿ ನೀಡಿ, ಅಲ್ಲಿದ್ದ ಭಾರತೀಯ ಸಿಬ್ಬಂದಿ ಭೇಟಿ ಮಾಡಿದರು. ‘ಸ್ಲೋವಾಕಿಯಾದ ಆರ್ಥಿಕ ಪ್ರಗತಿಯಲ್ಲಿ ಭಾರತದ ಪ್ರತಿಭೆಗಳ ಪಾತ್ರ ಮುಖ್ಯವಾದುದು’ ಎಂದು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.