ADVERTISEMENT

ಮಲೇಷ್ಯಾ: ಏರ್‌ ಏಷ್ಯಾ ವಿಮಾನದಲ್ಲಿ ಹಾವು, ಮಾರ್ಗ ಬದಲು

ಏಜೆನ್ಸೀಸ್
Published 14 ಫೆಬ್ರುವರಿ 2022, 12:21 IST
Last Updated 14 ಫೆಬ್ರುವರಿ 2022, 12:21 IST
   

ಕ್ವಾಲಾಲಂಪುರ: ಏರ್‌ ಏಷ್ಯಾ ಪ್ರಯಾಣಿಕ ವಿಮಾನವೊಂದರಲ್ಲಿ ವಿದ್ಯುತ್‌ ದೀಪಗಳ ಮೇಲೆ ಹಾವು ಹರಿದಾಡಿದ ಪರಿಣಾಮ ವಿಮಾನವನ್ನು ಮಾರ್ಗ ಬದಲಿಸಿ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ಮಲೇಷ್ಯಾದ ಬಜೆಟ್‌ ಕ್ಯಾರಿಯರ್‌ ವಿಮಾನ ಸಂಸ್ಥೆಯು ಸೋಮವಾರ ದೃಢಪಡಿಸಿದೆ.

‘ವಿಮಾನದಲ್ಲಿ ಹಾವು’ ಶೀರ್ಷಿಕೆಯಡಿ ಸ್ಯಾಮುಯೆಲ್‌ ಎಲ್‌.ಜಾಕ್ಸನ್‌ ಅವರು ಪೋಸ್ಟ್‌ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಮಾನದ ಕ್ಯಾಬಿನ್‌ನ ವಿದ್ಯುತ್‌ ದೀಪದ ಮೇಲೆ ಹಾವು ಹರಿದಾಡುತ್ತಿರುವುದನ್ನು ವಿಡಿಯೊ ತೋರಿಸಿದೆ.

ವಿಮಾನವು ಕಳೆದ ವಾರ ರಾಜಧಾನಿ ಕ್ಪಾಲಾಲಂಪುರದಿಂದ ಬೋರ್ನಿಯೊ ದ್ವೀಪದ ಪೂರ್ವ ಕರಾವಳಿಯಲ್ಲಿರುವ ತವೌಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇಂತಹ ಘಟನೆ ಬಹಳ ಅಪರೂಪ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ADVERTISEMENT

ವಿಮಾನದಲ್ಲಿ ಹಾವು ಕಾಣಿಸಿಕೊಂಡ ಬಗ್ಗೆ ಕ್ಯಾಪ್ಟನ್‌ಗೆ ತಿಳಿದ ನಂತರ ಅವರು ತವೌದಿಂದ ಪಶ್ಚಿಮಕ್ಕೆ 900 ಕಿಲೋಮೀಟರ್ (560 ಮೈಲುಗಳು) ಕುಚಿಂಗ್ ನಗರದಲ್ಲಿ ಮಾರ್ಗ ಬದಲಿಸಿ ವಿಮಾನವನ್ನು ಇಳಿಸುವ ನಿರ್ಧಾರ ಕೈಗೊಂಡರು.ನಂತರ ಪ್ರಯಾಣಿಕರಿಗೆ ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲಾಯಿತು ಎಂದು ಏರ್‌ ಏಷ್ಯಾ ಹೇಳಿದೆ.

‘ಪ್ರಯಾಣಿಕರ ಸುರಕ್ಷತೆಗೆ ಯಾವುದೇ ತೊಂದರೆ ಆಗಲಿಲ್ಲ’ ಎಂದು ಏರ್‌ ಏಷ್ಯಾದ ಮುಖ್ಯ ಸಂರಕ್ಷಣಾ ಅಧಿಕಾರಿ ಲಿಯಾಂಗ್‌ ಟೀನ್‌ ಲಿಂಗ್‌ ಹೇಳಿಕೆಯೊಂದರಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.