ADVERTISEMENT

ಸೊಮಾಲಿಯಾ ಹೋಟೆಲ್‌ ದಾಳಿ: 20 ಮಂದಿ ಸಾವು

ಏಜೆನ್ಸೀಸ್
Published 21 ಆಗಸ್ಟ್ 2022, 11:19 IST
Last Updated 21 ಆಗಸ್ಟ್ 2022, 11:19 IST
ಸೊಮಾಲಿಯಲ್ಲಿ ಉಗ್ರರ  ದಾಳಿಗೆ ಒಳಗಾದ ಹೋಟೆಲ್ –ಎಪಿ/ಪಿಟಿಐ ಚಿತ್ರ
ಸೊಮಾಲಿಯಲ್ಲಿ ಉಗ್ರರ  ದಾಳಿಗೆ ಒಳಗಾದ ಹೋಟೆಲ್ –ಎಪಿ/ಪಿಟಿಐ ಚಿತ್ರ   

ಮೊಗದಿಶು(ಎಪಿ): ಸೊಮಾಲಿಯಾ ರಾಜಧಾನಿಯ ಹೋಟೆಲ್‌ವೊಂದಕ್ಕೆ ಬಂದೂಕುಧಾರಿ ಉಗ್ರರು ನುಗ್ಗಿ ನಡೆಸಿದ ಭೀಕರ ದಾಳಿಯನ್ನು ಅಧಿಕಾರಿಗಳು ಭಾನುವಾರ ಹತ್ತಿಕ್ಕಿದ್ದಾರೆ. ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಶುಕ್ರವಾರ ಸಂಜೆ ಮೊಗದಿಶುವಿನ ಹಯಾತ್ ಹೋಟೆಲ್‌ಗೆ ನುಗ್ಗಿದ ಉಗ್ರರು ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಉಗ್ರರ ಸದೆಬಡಿಯಲು ಸೊಮಾಲಿಯಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು. ಸತತ 30 ತಾಸುಗಳ ನಂತರ ಉಗ್ರರ ದಾಳಿಯನ್ನು ಹತ್ತಿಕ್ಕಿ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಅಬ್ದಿ ಹಸನ್‌ ಹಿಜಾರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ದಾಳಿ ವೇಳೆ ಭದ್ರತಾ ಪಡೆಗಳು ಹೋಟೆಲ್‌ನಲ್ಲಿ ಸಿಲುಕಿದ್ದ ಹಲವು ನಾಗರಿಕರನ್ನು ರಕ್ಷಣೆ ಮಾಡಿವೆ’ ಎಂದು ಅವರು ತಿಳಿಸಿದ್ದಾರೆ. ಎಷ್ಟು ಮಂದಿ ಬಂದೂಕುಧಾರಿಗಳು ಹೋಟೆಲ್‌ಗೆ ನುಗ್ಗಿದ್ದರು ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ADVERTISEMENT

ಅಲ್‌–ಕೈದಾ ಜೊತೆ ಒಪ್ಪಂದ ಮಾಡಿಕೊಂಡಿರುವ ಇಸ್ಲಾಮಿಕ್ ತೀವ್ರವಾದಿ ಗುಂಪು ಅಲ್–ಶಬಾಬ್‌ ಈ ದಾಳಿಯ ಹೊಣೆ ಹೊತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.