ADVERTISEMENT

ಆಂಟಿಗುವಾ ಪೊಲೀಸರ ವೇಷದಲ್ಲಿದ್ದವರು ನನಗೆ ನಿರ್ದಯವಾಗಿ ಹೊಡೆದರು: ಮೆಹುಲ್ ಚೋಕ್ಸಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 12:14 IST
Last Updated 7 ಜೂನ್ 2021, 12:14 IST
ಮೆಹುಲ್ ಚೋಕ್ಸಿ: ಟ್ವಿಟರ್ ಚಿತ್ರ
ಮೆಹುಲ್ ಚೋಕ್ಸಿ: ಟ್ವಿಟರ್ ಚಿತ್ರ   

ಡೊಮಿನಿಕಾ: ಪ್ರಸ್ತುತ ಡೊಮಿನಿಕಾದ ಹೈಕೋರ್ಟ್‌ನಲ್ಲಿ ಭಾರತಕ್ಕೆ ಗಡೀಪಾರು ಮಾಡುವುದರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಮೆಹುಲ್ ಚೋಕ್ಸಿ, ಆಂಟಿಗುವಾ ಪೊಲೀಸರ ವೇಷದಲ್ಲಿದ್ದ ಕೆಲವರು ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದೆ ಎಂದು ಹೇಳಿದ್ದಾರೆ.

‘ಆಂಟಿಗುವಾ ಪೊಲೀಸರು ಎಂದು ಹೇಳಿಕೊಂಡ ಎಂಟರಿಂದ 10 ಪುರುಷರಿದ್ದ ಗುಂಪು ನನ್ನ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿತು. ನಾನು, ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಅವರು ನನ್ನ ಫೋನ್, ಕೈಗಡಿಯಾರ ಮತ್ತು ವಾಲೆಟ್ ಅನ್ನು ಕಸಿದುಕೊಂಡರು. ಆದರೆ, ಅವರು ನನ್ನನ್ನು ದೋಚಲು ಬಯಸುವುದಿಲ್ಲ ಎಂದು ನನಗೆ ಹೇಳಿ ನನ್ನ ಹಣವನ್ನು ಹಿಂದಿರುಗಿಸಿದರು’ ಎಂದು ಆಂಟಿಗುವಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮೆಹುಲ್ ಚೋಕ್ಸಿ ತಿಳಿಸಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹ 13,500 ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ತನ್ನ ಸೋದರಳಿಯ ಬ್ರಿಟನ್ನಿನಿಂದ ಹಸ್ತಾಂತರ ಪ್ರಕ್ರಿಯೆ ಎದುರಿಸುತ್ತಿರುವ ನೀರವ್ ಮೋದಿ ರೀತಿಯೇ ಭಾರತಕ್ಕೆ ಹಸ್ತಾಂತರಗೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಮತ್ತೊಂದೆಡೆ, ಚೋಕ್ಸಿ ಆಂಟಿಗುವಾದಲ್ಲಿ ಪೌರತ್ವವನ್ನು ಪಡೆದಿದ್ದು, ವಂಚನೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಭಾರತ ಬಿಟ್ಟು ತೆರಳಿದ್ದರು. ಅಲ್ಲದೆ, ಆಂಟಿಗುವಾದ ಗಡೀಪಾರು ವಿರೋಧಿ ಕಾನೂನುಗಳ ಅಡಿಯಲ್ಲಿ ಆಶ್ರಯ ಪಡೆದಿದ್ದರು.
.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.