ADVERTISEMENT

ಸೇನಾ ಪಥಸಂಚಲನದಲ್ಲಿ ಕ್ಷಿಪಣಿ ಪ್ರದರ್ಶನ: ದಕ್ಷಿಣ ಕೊರಿಯಾ ಕಳವಳ

ಏಜೆನ್ಸೀಸ್
Published 11 ಅಕ್ಟೋಬರ್ 2020, 14:15 IST
Last Updated 11 ಅಕ್ಟೋಬರ್ 2020, 14:15 IST
ಉತ್ತರ ಕೊರಿಯಾದ ಆಡಳಿತಾರೂಢ ಪಕ್ಷದ 75ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಸೇನಾ ಪಥಸಂಚಲನ –ರಾಯಿಟರ್ಸ್‌ ಚಿತ್ರ
ಉತ್ತರ ಕೊರಿಯಾದ ಆಡಳಿತಾರೂಢ ಪಕ್ಷದ 75ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಸೇನಾ ಪಥಸಂಚಲನ –ರಾಯಿಟರ್ಸ್‌ ಚಿತ್ರ   

ಸೋಲ್‌: ಉತ್ತರ ಕೊರಿಯಾದ ಆಡಳಿತಾರೂಢ ಪಕ್ಷದ 75ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಸೇನಾ ಪಥಸಂಚಲನದ ವೇಳೆ ದೀರ್ಘ ದೂರ ವ್ಯಾಪ್ತಿಯ ಕ್ಷಿಪಣಿ ಪ್ರದರ್ಶಿಸಿರುವುದಕ್ಕೆ ದಕ್ಷಿಣ ಕೊರಿಯಾ ಭಾನುವಾರ ಕಳವಳ ವ್ಯಕ್ತಪಡಿಸಿದೆ.

‘ಈ ಹಿಂದಿನ ನಿಶಸ್ತ್ರೀಕರಣ ಒಪ್ಪಂದಕ್ಕೆ ಉತ್ತರ ಕೊರಿಯಾವು ಬದ್ಧತೆ ತೋರಬೇಕು’ ಎಂದೂ ಹೇಳಿದೆ.

ಉತ್ತರ ಕೊರಿಯಾದ ಪ್ಯಾಂಗ್‌ಯಾಂಗ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೇನಾ ಪಥಸಂಚಲನದ ವೇಳೆ ಇದೇ ಮೊದಲ ಬಾರಿಗೆ ಎರಡು ಕ್ಷಿಪಣಿಗಳನ್ನು ವಿದೇಶಿ ಪ್ರೇಕ್ಷಕರ ಮುಂದೆ ಪ್ರದರ್ಶಿಸಲಾಗಿದೆ.

ADVERTISEMENT

‘ಶಾಂತಿ ಕಾಪಾಡುವ ಸಲುವಾಗಿ 2018ರಲ್ಲಿ ಮಾಡಿಕೊಂಡಿರುವ ಒಪ್ಪಂದಕ್ಕೆ ಉತ್ತರ ಕೊರಿಯಾ ಬದ್ಧವಾಗಿರಬೇಕು’ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.