ADVERTISEMENT

ಪ್ರಧಾನಿ ಹಾನ್ ಡಕ್ ಸೂ ಅವರ ದೋಷಾರೋಪಣೆ ರದ್ದುಗೊಳಿಸಿದ ದಕ್ಷಿಣ ಕೊರಿಯಾ ನ್ಯಾಯಾಲಯ

ಪಿಟಿಐ
Published 24 ಮಾರ್ಚ್ 2025, 4:27 IST
Last Updated 24 ಮಾರ್ಚ್ 2025, 4:27 IST
   

ಸೋಲ್: ದಕ್ಷಿಣ ಕೊರಿಯಾದ ಸಾಂವಿಧಾನಿಕ ನ್ಯಾಯಾಲಯವು ಪ್ರಧಾನಿ ಹಾನ್ ಡಕ್ ಸೂ ಅವರ ದೋಷಾರೋಪಣೆಯನ್ನು ರದ್ದುಗೊಳಿಸಿ, ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಿದೆ. ಆದರೆ, ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ಪ್ರತ್ಯೇಕ ದೋಷಾರೋಪಣೆಯ ಬಗ್ಗೆ ಇನ್ನೂ ತೀರ್ಪು ನೀಡಿಲ್ಲ.

ಡಿಸೆಂಬರ್ 3ರಂದು ಬೃಹತ್ ರಾಜಕೀಯ ಬಿಕ್ಕಟ್ಟಿಗೆ ಕಾರಣವಾದ ಮಾರ್ಷಲ್ ಲಾ ಹೇರಿಕೆಗೆ ಸಂಬಂಧಿಸಿದಂತೆ ಅಧ್ಯಕ್ಷ ಯೂನ್ ಅವರನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ದೋಷಾರೋಪಣೆಗೊಳಪಡಿಸಿ, ಪದಚ್ಯುತಗೊಳಿಸಿದ ಬಳಿಕ ಹಾನ್ ಹಂಗಾಮಿ ಅಧ್ಯಕ್ಷರಾಗಿದ್ದರು. ಆದರೆ, ವಿರೋಧ ಪಕ್ಷದ ಸಂಸದರೊಂದಿಗಿನ ರಾಜಕೀಯ ಸಂಘರ್ಷದ ನಂತರ ಡಿಸೆಂಬರ್ ಅಂತ್ಯದಲ್ಲಿ ಹಾನ್ ಅವರನ್ನು ದೋಷಾರೋಪಣೆಗೆ ಒಳಪಡಿಸಲಾಗಿತ್ತು.

ದೇಶದ ಉನ್ನತ ಹುದ್ದೆಯಲ್ಲಿದ್ದ ಇಬ್ಬರನ್ನು ಪದಚ್ಯುತಗೊಳಿಸಿದ ನಂತರ ದೇಶದ ವಿಭಜನೆಯ ಕಳವಳವನ್ನು ತೀವ್ರಗೊಳಿಸಿದ್ದವು. ದೇಶದ ರಾಜತಾಂತ್ರಿಕ ಮತ್ತು ಆರ್ಥಿಕ ಚಟುವಟಿಕೆಗಳ ಬಗ್ಗೆ ಆತಂಕವನ್ನು ಹೆಚ್ಚಿಸಿದ್ದವು. ಉಪ ಪ್ರಧಾನ ಮಂತ್ರಿ ಮತ್ತು ಹಣಕಾಸು ಸಚಿವ ಚೋಯ್ ಸಾಂಗ್-ಮೋಕ್ ಅಂದಿನಿಂದ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ADVERTISEMENT

ಸೋಮವಾರ, ನ್ಯಾಯಾಲಯದ ಎಂಟು ನ್ಯಾಯಮೂರ್ತಿಗಳ ಪೈಕಿ ಏಳು ಮಂದಿ ಹಾನ್ ಅವರ ದೋಷಾರೋಪಣೆಯನ್ನು ವಜಾಗೊಳಿಸಿದರು. ಅವರ ವಿರುದ್ಧದ ಆರೋಪಗಳು ಅವರನ್ನು ಪದಚ್ಯುತಗೊಳಿಸುವಷ್ಟು ಗಂಭೀರವಾಗಿಲ್ಲ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವರ ವಿರುದ್ಧದ ದೋಷಾರೋಪಣೆಗೆ ಅಗತ್ಯವಾದ ಕೋರಂ ಇರಲಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಾಲಯವು ಮಾಜಿ ಅಧ್ಯಕ್ಷ ಯೂನ್ ಅವರ ದೋಷಾರೋಪಣೆಯ ಮೇಲೆ ಇನ್ನೂ ತೀರ್ಪು ನೀಡಿಲ್ಲ. ನ್ಯಾಯಾಲಯವು ಯೂನ್ ಅವರ ದೋಷಾರೋಪಣೆಯನ್ನು ಎತ್ತಿಹಿಡಿದರೆ, ದಕ್ಷಿಣ ಕೊರಿಯಾ ಹೊಸ ಅಧ್ಯಕ್ಷರಿಗೆ ಚುನಾವಣೆಯನ್ನು ನಡೆಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.