ADVERTISEMENT

ಭೂಮಿಗೆ ಮರಳಿದ ಗಗನಯಾನಿ ರಾಜಾ ಚಾರಿ

​ಪ್ರಜಾವಾಣಿ ವಾರ್ತೆ
Published 6 ಮೇ 2022, 16:24 IST
Last Updated 6 ಮೇ 2022, 16:24 IST

ಕೇಪ್‌ ಕೆನವೆರಾಲ್‌, ಅಮೆರಿಕ (ಎಪಿ): ಭಾರತ ಮೂಲದ ಅಮೆರಿಕ ಗಗನಯಾತ್ರಿ ರಾಜಾ ಚಾರಿ ಸೇರಿ ನಾಲ್ವರು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳು ಕಾರ್ಯನಿರ್ವಹಿಸಿ, ಎಲಾನ್‌ ಮಸ್ಕ್‌ ಅವರ ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ ಶುಕ್ರವಾರ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿದ್ದಾರೆ.

ರಾಜಾ ಚಾರಿ ಸೇರಿ ಮೂವರು ಅಮೆರಿಕದಗಗನಯಾತ್ರಿಗಳು ಮತ್ತು ಒಬ್ಬ ಜರ್ಮನಿಯ ಗಗನಯಾನಿ ಹೊತ್ತ ಕ್ಯಾಪ್ಸುಲ್‌ ಬಾಹ್ಯಾಕಾಶ ನಿಲ್ದಾಣ ತೊರೆದ 24 ತಾಸುಗಳ ನಂತರ ಫ್ಲಾರಿಡಾ ಕರಾವಳಿ ಟ್ಯಾಂಪಾ ಬಳಿ ಇಳಿದಿದೆ. ಗಗನಯಾತ್ರಿಗಳು ವೈದ್ಯಕೀಯ ಪರೀಕ್ಷೆಯ ನಂತರ ಹೂಸ್ಟನ್‌ಗೆ ವಾಪಸಾಗುವ ನಿರೀಕ್ಷೆಯಲ್ಲಿ ನಾಸಾ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT