ADVERTISEMENT

ಸ್ಪೇಸ್ ಎಕ್ಸ್ ನಿರ್ಮಿತ ’ಫಾಲ್ಕೊನ್ 9’ ರಾಕೆಟ್ ಉಡಾವಣೆ ಯಶಸ್ವಿ

ರಾಯಿಟರ್ಸ್
Published 2 ಮಾರ್ಚ್ 2023, 13:09 IST
Last Updated 2 ಮಾರ್ಚ್ 2023, 13:09 IST
ಸ್ಪೇಸ್ ಎಕ್ಸ್  ನಿರ್ಮಿತ ’ಫಾಲ್ಕೊನ್ 9’ ರಾಕೆಟ್ ಗುರುವಾರ ನಭಕ್ಕೆ ಚಿಮ್ಮಿತು –ರಾಯಿಟರ್ಸ್ ಚಿತ್ರ
ಸ್ಪೇಸ್ ಎಕ್ಸ್ ನಿರ್ಮಿತ ’ಫಾಲ್ಕೊನ್ 9’ ರಾಕೆಟ್ ಗುರುವಾರ ನಭಕ್ಕೆ ಚಿಮ್ಮಿತು –ರಾಯಿಟರ್ಸ್ ಚಿತ್ರ    

ಫ್ಲಾರಿಡಾ (ಅಮೆರಿಕ) : ಅಮೆರಿಕ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಯೋಜನೆಯ ಭಾಗವಾಗಿ, ಜಗತ್ತಿನ ಶ್ರೀಮಂತ ಎಲಾನ್ ಮಾಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿಯ ’ಫಾಲ್ಕೊನ್‌ 9 ’ ರಾಕೆಟ್‌ ಗುರುವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿತು. ಸ್ಥಳೀಯ ಕಾಲಮಾನ 12.34ಕ್ಕೆ ಫ್ಲಾರಿಡಾದ ನಾಸಾ ಕೇಂದ್ರದಿಂದ ನಾಲ್ವರು ಸಿಬ್ಬಂದಿಗಳ ತಂಡವನ್ನು ಹೊತ್ತ ರಾಕೆಟ್ ನಭಕ್ಕೆ ಚಿಮ್ಮಿತ್ತು.

ರಷ್ಯಾ, ಯುಎಇಯಿಂದ ತಲಾ ಒಬ್ಬರು ಮತ್ತು ಅಮೆರಿಕದ ನಾಸಾದಿಂದ ಇಬ್ಬರು ಗಗನಯಾತ್ರಿಗಳು ತಂಡದಲ್ಲಿದ್ದಾರೆ. ತಂಡಕ್ಕೆ ’ಡ್ರ್ಯಾಗನ್’ ಎಂದು ಹೆಸರಿಸಿದ್ದಾರೆ. ರಾಕೆಟ್‌ನ ತುತ್ತ ತುದಿಯು, ಡ್ರ್ಯಾಗನ್ ಸಿಬ್ಬಂದಿಗಳು ಕೂತ ಕ್ಯಾಪ್ಸೂಲ್ ಹೊಂದಿತ್ತು.

ಶಬ್ಧದ ವೇಗಕ್ಕಿಂತ 20 ಪಟ್ಟು ವೇಗದಲ್ಲಿ ಹಾರಿದ ರಾಕೆಟ್, ಉಡಾಯಿಸಿದ 9 ನಿಮಿಷಗಳಲ್ಲೇ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಕ್ಷೆ ತಲುಪಿತು.

ADVERTISEMENT

ಈ ಉಡಾವಣೆಯ ದೃಶ್ಯಾವಳಿಗಳನ್ನು ನಾಸಾ ತನ್ನ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.