ADVERTISEMENT

ಪ್ರಾಯೋಗಿಕ ಉಡಾವಣೆಯಲ್ಲಿಯೇ ಸ್ಪೋಟಗೊಂಡ ಸ್ಪೇಸ್ ಎಕ್ಸ್‌ನ Starship ರಾಕೆಟ್‌

ಪಿಟಿಐ
Published 20 ಏಪ್ರಿಲ್ 2023, 14:51 IST
Last Updated 20 ಏಪ್ರಿಲ್ 2023, 14:51 IST
ಚಿತ್ರ ಕೃಪೆ : (Twitter / @johnkrausphotos)
ಚಿತ್ರ ಕೃಪೆ : (Twitter / @johnkrausphotos)   

ಟೆಕ್ಸಾಸ್‌ : ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಕೆಟ್‌ ಎಂದು ಹೆಸರುವಾಸಿಯಾದ, ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ ಕಂಪೆನಿಯ ‘ಸ್ಟಾರ್‌ಶಿಪ್‌ ರಾಕೆಟ್‌‘ ತನ್ನ ಪ್ರಾಯೋಗಿಕ ಉಡಾವಣೆಯಲ್ಲಿಯೇ ಸ್ಪೋಟಗೊಂಡಿದೆ.

ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್‌ಎಕ್ಸ್ ಕಂಪೆನಿಯ ಸ್ಟಾರ್‌ಬೆಸ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಈ ದೈತ್ಯಾಕಾರದ ರಾಕೆಟ್‌ ಅನ್ನು ಉಡಾವಣೆ ಮಾಡಲಾಗಿತ್ತು. ಬೆಳಿಗ್ಗೆ ಸ್ಥಳೀಯ ಕಾಲಮಾನ 8.33ರ ವೇಳೆ ರಾಕೆಟ್‌ಅನ್ನು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿತ್ತು. ಗಗನಯಾತ್ರಿಗಳನ್ನು ಚಂದ್ರ, ಮಂಗಳ ಹಾಗೂ ಅದರಾಚೆಗಿನ ಗ್ರಹಗಳಿಗೆ ಕಳುಹಿಸುವ ಉದ್ದೇಶದಿಂದ ಸ್ಟಾರ್‌ಶಿಪ್‌ ರಾಕೆಟ್‌ಅನ್ನು ತಯಾರಿಸಲಾಗಿತ್ತು.

ಉಡಾವಣೆಯಾದ ಮೂರು ನಿಮಿಷದಲ್ಲಿ ಮೊದಲ ಹಂತದಿಂದ ಸ್ಟಾರ್‌ಶಿಪ್‌ ಕ್ಯಾಪ್ಸುಲ್‌ ಬೇರ್ಪಡಬೇಕಿತ್ತು. ಬೇರ್ಪಡಲು ವಿಫಲವಾದ್ದರಿಂದ ರಾಕೆಟ್‌ ಮಧ್ಯದಲ್ಲಿಯೇ ಸ್ಟೋಟಗೊಂಡಿದೆ. ಸ್ಟೋಟಗೊಂಡ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ADVERTISEMENT

ರಾಕೆಟ್‌ ಉಡಾವಣೆ ಅಷ್ಟೇನು ರೋಮಾಂಚಕಾರಿಯಾಗಿರಲಿಲ್ಲ. ನಿಗದಿಪಡಿಸಿದ ಸಮಯಕ್ಕಿಂತ ಮುಂಚಿತವಾಗಿ ರಾಕೆಟ್‌ ಬೇರ್ಪಟ್ಟಿದ್ದರಿಂದ ಈ ರೀತಿಯಾಗಿದೆ‘ಎಂದು ಸ್ಪೇಸ್‌ ಎಕ್ಸ್‌ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.