ADVERTISEMENT

ಶ್ರೀಲಂಕಾ: ಅಕ್ರಮವಾಗಿ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದ 67 ಜನರ ಬಂಧನ 

ಏಜೆನ್ಸೀಸ್
Published 24 ಮೇ 2022, 11:43 IST
Last Updated 24 ಮೇ 2022, 11:43 IST
.
.   

ಕೊಲಂಬೊ: ಶ್ರೀಲಂಕಾದಿಂದ ಆಸ್ಟ್ರೇಲಿಯಾಕ್ಕೆ ಸಮುದ್ರ ಮಾರ್ಗದ ಮೂಲಕ ಅಕ್ರಮವಾಗಿ ತೆರಳುತ್ತಿದ್ದ 67 ಜನರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಮಾಹಿತಿ ನೀಡಿದೆ.

ಟ್ರಿಂಕೋಮಲಿ ಪಟ್ಟಣದ ಬಂದರಿನಲ್ಲಿ ಮೊದಲ 12 ಮಂದಿಯನ್ನು ಬಂಧಿಸಲಾಯಿತು. ಮೀನುಗಾರಿಕೆ ದೋಣಿಯ ಮೂಲಕ ಪ್ರಯಾಣಿಸುತ್ತಿದ್ದ 3–53 ವರ್ಷದೊಳಗಿನ 55 ಮಂದಿಯನ್ನು ಬಂಧಿಸಲಾಗಿದೆ. ಮಾನವ ಕಳ್ಳಸಾಗಣೆಯ ಶಂಕೆ ಇದೆ ಎಂದು ಶ್ರೀಲಂಕಾ ನೌಕಾಪಡೆಯ ವಕ್ತಾರ ಇಂಡಿಕಾ ಡಿ ಸಿಲ್ವಾ ತಿಳಿಸಿದ್ದಾರೆ.

ಕ್ರಿಸ್ಮಸ್‌ ದ್ವಿಪದ ಮಾರ್ಗವಾಗಿ ಪ್ರಯಾಣಿಸುತ್ತಿದ್ದ 15 ಶ್ರೀಲಂಕಾ ಪ್ರಜೆಗಳನ್ನು ಅಧಿಕಾರಿಗಳು ಮರಳಿ ಕಳಿಸಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.