ADVERTISEMENT

ನಿರಾಶ್ರಿತರ ವಾಪಾಸು: ಸಮಿತಿ ರಚಿಸಿದ ಶ್ರೀಲಂಕಾ ಸರ್ಕಾರ

ಪಿಟಿಐ
Published 5 ಸೆಪ್ಟೆಂಬರ್ 2022, 16:08 IST
Last Updated 5 ಸೆಪ್ಟೆಂಬರ್ 2022, 16:08 IST

ಕೊಲಂಬೊ: ತಮಿಳುನಾಡಿನಲ್ಲಿರುವ ಸಾವಿರಾರು ಶ್ರೀಲಂಕಾ ನಿರಾಶ್ರಿತರು ಪುನಃ ಶ್ರೀಲಂಕಾಗೆ ಮರಳಲು ಇಚ್ಛಿಸಿದರೆ, ಅವರಿಗೆ ನೆರವಾಗುವ ಸಲುವಾಗಿ ಶ್ರೀಲಂಕಾ ಸರ್ಕಾರವುಸಮಿತಿಯೊಂದನ್ನು ಸೋಮವಾರ ರಚಿಸಿದೆ.

ಈಳಂ ರೆಫ್ಯೂಜಿ ರಿಹ್ಯಾಬಿಲಿಟೇಷನ್‌ ಸಂಸ್ಥೆಯ ಮನವಿಯ ಮೇರೆಗೆ ಅಧ್ಯಕ್ಷರ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಅಧ್ಯಕ್ಷರ ಕಚೇರಿಯಲ್ಲಿ ಚರ್ಚೆ ನಡೆಯಿತು. ತಮಿಳುನಾಡಿನಲ್ಲಿರುವ ಶ್ರೀಲಂಕಾ ನಿರಾಶ್ರಿತರನ್ನು ವಾಪಸ್ ಕರೆತರುವ ಕುರಿತು ಚರ್ಚೆ ನಡೆಸಲಾಯಿತು ಎಂದು ವೆಬ್‌ಸೈಟ್‌ವೊಂದು ವರದಿ ಮಾಡಿದೆ.

3,800 ನಿರಾಶ್ರಿತರು ಶ್ರೀಲಂಕಾಗೆ ವಾಪಾಸಾಗಲು ಇಚ್ಛಿಸಿದ್ದಾರೆ ಎಂದು ಸಂಸ್ಥೆ ಹೇಳಿದೆ. ಚೆನ್ನೈನಲ್ಲಿರುವ ಶ್ರೀಲಂಕಾ ಡೆಪ್ಯುಟಿ ಹೈ ಕಮಿಷನ್‌ ಕಚೇರಿಯು ಈ ಕುರಿತು ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದೆ.

ADVERTISEMENT

1 ಲಕ್ಷ ನಿರಾಶ್ರಿತರು ತಮಿಳುನಾಡಿನಲ್ಲಿದ್ದಾರೆ. ಇವರಲ್ಲಿ 68 ಸಾವಿರ ಜನರು ಸರ್ಕಾರದ 100ಕ್ಕೂ ಅಧಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಶ್ರೀಲಂಕಾ ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.