ADVERTISEMENT

ಶ್ರೀಲಂಕಾಗೆ ಚೀನಾ ಬ್ಯಾಂಕ್‌ನಿಂದ ₹76 ಸಾವಿರ ಕೋಟಿ ತುರ್ತು ನೆರವು?

​ಪ್ರಜಾವಾಣಿ ವಾರ್ತೆ
Published 8 ಮೇ 2022, 10:51 IST
Last Updated 8 ಮೇ 2022, 10:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ:ಚೀನಾದ ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಶ್ರೀಲಂಕಾಕ್ಕೆ ₹76 ಸಾವಿರ ಕೋಟಿತುರ್ತು ಸಹಾಯ ನೀಡಲು ಒಪ್ಪಿದೆ ಎಂದು ದೇಶದ ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ.

ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿರುವಾಗ, ಸಾಲದಾತರಿಂದ ಸ್ಟೇಟ್ ಬ್ಯಾಂಕ್‌ಗಳಿಗೆ ವಿದೇಶಿ ವಿನಿಮಯಕ್ಕೆ ಅಗತ್ಯವಿರುವ ನಗದು ಲಭ್ಯತೆಯ ಬೆಂಬಲ ನೀಡುವಂತೆ ಶ್ರೀಲಂಕಾ ಕೋರಿತ್ತು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್‌ ಸಾಂಕ್ರಾಮಿಕ, ಗಗನಕ್ಕೇರಿರುವ ತೈಲ ಬೆಲೆಗಳು ಮತ್ತು ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಸರ್ಕಾರದ ಜನಪ್ರಿಯ ತೆರಿಗೆ ಕಡಿತದಿಂದಾಗಿ ದಕ್ಷಿಣ ಏಷ್ಯಾದ ದ್ವೀಪ ರಾಷ್ಟ್ರತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಬಳಸಬಹುದಾದ ವಿದೇಶಿ ಮೀಸಲು ₹ 38 ಸಾವಿರ ಕೋಟಿಗೆ ಕುಸಿದಿದೆ ಎಂದು ಹಣಕಾಸು ಸಚಿವ ಅಲಿ ಸಬ್ರಿ ಕಳೆದ ವಾರವೇ ಹೇಳಿದ್ದರು.

ADVERTISEMENT

ಆಹಾರ, ಇಂಧನ ಮತ್ತು ಔಷಧಿಗಳ ಆಮದು ಕೊರತೆಯಿಂದ ದೇಶದಲ್ಲಿ ಉದ್ಭವಿಸಿರುವ ಹಾಹಾಕಾರಕ್ಕೆ ಜನರು ಕಳೆದ ಒಂದು ತಿಂಗಳಿಂದ ಬೀದಿಗಿದು ಪ್ರತಿಭಟಿಸುತ್ತಿದ್ದಾರೆ. ಪರಿಸ್ಥಿತಿ ತಹಬದಿಗೆ ತರಲು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಶುಕ್ರವಾರ ಮತ್ತೆ ಎರಡನೇ ಬಾರಿಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.