ಕೊಲಂಬೊ: ಗುಂಪು ಘರ್ಷಣೆ ನಡೆದ ಕಾರಣಕ್ಕೆ ಕರ್ಫ್ಯೂ ಜಾರಿ ಮಾಡಲಾಗಿದ್ದಪಶ್ಚಿಮ ಕರಾವಳಿ ನಗರ ನೆಗಂಬೊ ಸಹಜ ಸ್ಥತಿಗೆ ಮರಳಿದೆ.
ಭಾನುವಾರ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದ ಕಾರಣ ಕರ್ಫ್ಯೂ ವಿಧಿಸಲಾಗಿತ್ತು. ಸೋಮವಾರ ಬೆಳಗ್ಗೆ 7 ಗಂಟೆಗೆ ಕರ್ಫ್ಯೂ ತೆರವುಗೊಳಿಸಲಾಗಿದೆ.
‘ನೆಗಂಬೊದಲ್ಲಿ ಪರಿಸ್ಥಿತಿ ಈಗ ಶಾಂತವಾಗಿದೆ’ ಎಂದು ಪೊಲೀಸ್ ವಕ್ತಾರ ಸೋಮವಾರ ತಿಳಿಸಿದ್ದಾರೆ.
‘ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದ್ದು, ಇಬ್ಬರನ್ನು ಬಂಧಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯುತ್ತಿತ್ತು. ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ಮಧ್ಯಪ್ರವೇಶಿಸಿದ ಬಳಿಕವಾಗ್ವಾದ ತಾರಕಕ್ಕೇರಿ ಘರ್ಷಣೆ ಉಂಟಾಗಿದೆ. ಬಳಿಕಕತ್ತಿಗಳನ್ನು ಹಿಡಿದ ಗುಂಪೊಂದು ತ್ರಿಚಕ್ರ ವಾಹನಗಳ ಮೇಲೆ ದಾಳಿ ನಡೆಸಿತ್ತು.ಘರ್ಷಣೆಯಲ್ಲಿ ಕೆಲವರು ಗಾಯಗೊಂಡಿದ್ದರು. ವಾಹನವೊಂದಕ್ಕೆ ಬೆಂಕಿ ಹಚ್ಚಲಾಗಿತ್ತು’ ಎಂದು ಪೊಲೀಸರು ವಿವರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿಫೇಸ್‌ಬುಕ್, ವಾಟ್ಸ್‌ಆ್ಯಪ್ ಸಹಿತ ಕೆಲವು ಸಾಮಾಜಿಕ ಜಾಲತಾಣಗಳಿಗೂ ಸರ್ಕಾರಸೋಮವಾರ ಬೆಳಗಿನ ತನಕ ನಿಷೇಧ ಹೇರಿತ್ತು. ಬಳಿಕ ನಿಷೇಧ ಹಿಂಪಡೆಯಲಾಗಿದೆ.
‘ಘರ್ಷಣೆಯಲ್ಲಿ ಸ್ವತ್ತು ಕಳೆದುಕೊಂಡವರಿಗೆ ಪರಿಹಾರ ನೀಡಲಾಗುವುದು’ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಘೋಷಿಸಿದ್ದಾರೆ.
ಗಡುವು ವಿಸ್ತರಣೆ:ಈಸ್ಟರ್ ಭಾನುವಾರದ ದಾಳಿ ಶಂಕಿತರನ್ನು ಪತ್ತೆ ಹಚ್ಚುವ ಸಲುವಾಗಿ,ಸಾರ್ವಜನಿಕರು ತಮ್ಮ ಬಳಿ ಇರುವ ಹರಿತ ಆಯುಧಗಳು ಮತ್ತು ಸೇನಾಪಡೆಯ ಸಮವಸ್ತ್ರ ಹೋಲುವ ರೀತಿಯ ಉಡುಪುಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲು ಸರ್ಕಾರ ಆದೇಶಿಸಿತ್ತು. ಈ ಗಡುವನ್ನು ಇನ್ನೆರಡು ದಿನಗಳಿಗೆ ವಿಸ್ತರಿಸಲಾಗಿದೆ.
ಹರಿತ ಆಯುಧಗಳನ್ನು ಇರಿಸಿಕೊಂಡಿದ್ದಕ್ಕಾಗಿ ಈವರೆಗೆ, ರಾಜಕಾರಣಿಗಳ ಸಹಿತ ಹಲವರನ್ನು ಬಂಧಿಸಲಾಗಿದೆ ಎಂದುಪೊಲೀಸರು ಮಾಹಿತಿನೀಡಿದ್ದಾರೆ.
ಮತ್ತೆ ತೆರೆದ ಶಾಲೆಗಳು: ಹಾಜರಾತಿ ವಿರಳ
ಈಸ್ಟರ್ ಭಾನುವಾರ ನಡೆದಿದ್ದ ಆತ್ಮಾಹುತಿ ದಾಳಿ ಬಳಿಕ ಮುಚ್ಚಲಾಗಿದ್ದ ಶಾಲೆಗಳು ಸೋಮವಾರ ಭಾರಿ ಭದ್ರತೆ ನಡುವೆ ಪುನರಾರಂಭಗೊಂಡವು. ಆದರೆ ವಿದ್ಯಾರ್ಥಿಗಳ ಹಾಜರಾತಿ ವಿರಳವಾಗಿತ್ತು.
‘ಗ್ರೇಡ್ 6ರಿಂದ 13ರವರೆಗಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಎರಡನೇ ಅವಧಿಯ ತರಗತಿಗಳು ಆರಂಭವಾಗಿದೆ. ಮೇ 13ರಿಂದ ಗ್ರೇಡ್ 1ರಿಂದ 5ರವರೆಗಿನ ತರಗತಿಗಳು ಆರಂಭವಾಗಲಿವೆ’ ಎಂದು ನ್ಯೂಸ್ ಫಸ್ಟ್ ಚಾನಲ್ ವರದಿ ಮಾಡಿದೆ. ವಿದ್ಯಾರ್ಥಿಗಳಂತೆ ಶಿಕ್ಷಕರ ಹಾಜರಾತಿಯೂ ಕಡಿಮೆ ಇತ್ತು ಎಂದು ವರದಿಯಾಗಿದೆ.
***
ತಮ್ಮ ಅಸ್ತಿತ್ವ ಇನ್ನೂ ಇದೆ ಎಂಬುದನ್ನು ವಿಶ್ವಕ್ಕೆ ತಿಳಿಸಲು ಐಎಸ್ ಉಗ್ರರು ಈಸ್ಟರ್ ಸಂಡೆ ದಿನ ದಾಳಿ ನಡೆಸಿದ್ದಾರೆ.
-ಮೈತ್ರಿಪಾಲ ಸಿರಿಸೇನಾ,ಶ್ರೀಲಂಕಾ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.