ADVERTISEMENT

ಶ್ರೀಲಂಕಾ: ಕೊರೊನಾ ಸೋಂಕಿತರ ಪೈಕಿ ನೌಕಾಪಡೆ ಸಿಬ್ಬಂದಿಯೇ ಹೆಚ್ಚು

327 ಸಿಬ್ಬಂದಿಗೆ ಕೋವಿಡ್–19

ಪಿಟಿಐ
Published 5 ಮೇ 2020, 9:28 IST
Last Updated 5 ಮೇ 2020, 9:28 IST
ಶ್ರೀಲಂಕಾ ನೌಕಾಪಡೆಯ ಬೋಟ್ – (ಶ್ರೀಲಂಕಾ ನೌಕಾಪಡೆ ವೆಬ್‌ಸೈಟ್‌ ಚಿತ್ರ)
ಶ್ರೀಲಂಕಾ ನೌಕಾಪಡೆಯ ಬೋಟ್ – (ಶ್ರೀಲಂಕಾ ನೌಕಾಪಡೆ ವೆಬ್‌ಸೈಟ್‌ ಚಿತ್ರ)   

ಕೊಲಂಬೊ: ಶ್ರೀಲಂಕಾದಲ್ಲಿ ಈವರೆಗೆ ಒಟ್ಟು 752 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಈ ಪೈಕಿ 327 ಮಂದಿ ನೌಕಾಪಡೆ ಸಿಬ್ಬಂದಿಯಾಗಿದ್ದಾರೆ.

‘ದೇಶದಲ್ಲಿ ಸೋಮವಾರ ಮಧ್ಯರಾತ್ರಿ ವೇಳೆಗೆ 33 ಹೊಸ ಕೊರೊನಾ ಪ್ರರಣ ದೃಢಪಟ್ಟಿವೆ. ಈ ಪೈಕಿ 31 ಮಂದಿ ವೆಲಿಸರಾ ಶಿಬಿರದಲ್ಲಿರುವ ನಮ್ಮ ನಾವಿಕರು. ಇನ್ನಿಬ್ಬರು ಇವರೊಂದಿಗೆ ಸಂಪರ್ಕದಲ್ಲಿದ್ದವರು’ ಎಂದು ಸೇನಾ ಮುಖ್ಯಸ್ಥ ಶಿವೇಂದ್ರ ಸಿಲ್ವಾ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ಕೊಲಂಬೊ ಬಳಿ ಇರುವ ವೆಲಿಸರಾ ಶಿಬಿರದಲ್ಲಿರುವ ಅಧಿಕಾರಿಗಳು ಕೊರೊನಾ ಸೋಂಕಿತ ಮಾದಕ ವ್ಯಸನಿಗಳ ಜತೆ ಸಂಪರ್ಕಕ್ಕೆ ಬಂದಿದ್ದರು. ಬಳಿಕ ರಜೆಯಲ್ಲಿ ಮನೆಗೆ ತೆರಳಿದ್ದರು. ಇದು ಸೋಂಕು ಹರಡಲು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ದೇಶದಲ್ಲಿ ಈವರೆಗೆ 752 ಜನರಿಗೆ ಸೋಂಕು ತಗುಲಿದೆ. ಈ ಪೈಕಿ 194 ಜನ ಗುಣಮುಖರಾಗಿದ್ದಾರೆ. ನೌಕಾಪಡೆ ಸಿಬ್ಬಂದಿಯ 1,008 ಸಂಬಂಧಿಕರು ಈಗ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಸಿಲ್ವಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.