ADVERTISEMENT

ಶ್ರೀಲಂಕಾ: ಅಕ್ರಮ ವಲಸೆ ಹೋಗುತ್ತಿದ್ದ 51 ಮಂದಿ ಬಂಧನ

ಪಿಟಿಐ
Published 3 ಜುಲೈ 2022, 11:35 IST
Last Updated 3 ಜುಲೈ 2022, 11:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲಂಬೊ (ಪಿಟಿಐ): ಆರ್ಥಿಕ ಬಿಕ್ಕಟ್ಟಿನ ಕಾರಣ ಶ್ರೀಲಂಕಾದಿಂದ ಅಕ್ರಮವಾಗಿ ಸಮುದ್ರ ಮಾರ್ಗದ ಮೂಲಕ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಲು ಯೋಜಿಸಿದ್ದ 51 ಜನರನ್ನು ಶ್ರೀಲಂಕಾದ ನೌಕಾಪಡೆ ಭಾನುವಾರ ಬಂಧಿಸಿದೆ.

‘ನೌಕಾಪಡೆಯು ಭಾನುವಾರ ಬೆಳಿಗ್ಗೆ ಪೂರ್ವ ಸಮುದ್ರದಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಈ 51 ಜನರನ್ನು ಬಂಧಿಸಿದೆ. ಇವರ ಅಕ್ರಮವಾಗಿ ವಿದೇಶಕ್ಕೆ ಹೋಗು ಯತ್ನದಲ್ಲಿದ್ದರು ಎಂದು ಶಂಕಿಸಲಾಗಿದೆ’ ಎಂದುಶ್ರೀಲಂಕಾ ನೌಕಾಪಡೆ ಪ್ರಕಟಣೆ ತಿಳಿಸಿದೆ.

ಕಳೆದ ಶನಿವಾರ ಶ್ರೀಲಂಕಾ ಕರಾವಳಿ ಕಾವಲು ಪಡೆ ಮತ್ತು ಪೊಲೀಸ್ ತಂಡವು ಮಾರವಿಲಾದಲ್ಲಿ ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ವಲಸೆ ಹೋಗುತ್ತಿದ್ದ 24 ಜನರನ್ನು ಬಂಧಿಸಿತ್ತು.ಅದೇ ರೀತಿ ಜೂನ್ 27 ಮತ್ತು 28 ರಂದು 100ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.