ADVERTISEMENT

ಶ್ರೀಲಂಕಾ ಅಧ್ಯಕ್ಷರ ನಿವಾಸದಲ್ಲಿ ಕಳವು: ಮೂವರ ಬಂಧನ

ಪಿಟಿಐ
Published 25 ಜುಲೈ 2022, 11:00 IST
Last Updated 25 ಜುಲೈ 2022, 11:00 IST
ಶ್ರೀಲಂಕಾ ಅಧ್ಯಕ್ಷರ ನಿವಾಸದಲ್ಲಿ ಕಾಣಿಸಿಕೊಂಡಿದ್ದ ಪ್ರತಿಭಟನಾಕಾರರು
ಶ್ರೀಲಂಕಾ ಅಧ್ಯಕ್ಷರ ನಿವಾಸದಲ್ಲಿ ಕಾಣಿಸಿಕೊಂಡಿದ್ದ ಪ್ರತಿಭಟನಾಕಾರರು   

ಕೊಲಂಬೊ: ಶ್ರೀಲಂಕಾ ಅಧ್ಯಕ್ಷರ ನಿವಾಸದಿಂದ ಚಿನ್ನಲೇಪಿತ 40 ಹಿತ್ತಾಳೆಯ ಸಾಕೆಟ್‌ಗಳನ್ನುಮಾರಾಟ ಮಾಡಲು ಯತ್ನಿಸಿದ ಆರೋಪ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಜೂನ್‌ 9ರಂದು ಸರ್ಕಾರ ವಿರೋಧಿ ಪ್ರತಿಭಟನಾಕಾರರು ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸಅವರ ಅಧಿಕೃತ ನಿವಾಸ ಮತ್ತು ಮಾಜಿ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ನುಗ್ಗಿದ್ದರು. ಈ ವೇಳೆ ಚಿನ್ನ ಲೇಪಿತ ಸಾಕೆಟ್‌ ಕದ್ದ ಆರೋಪ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.‌

ಆರೋಪಿಗಳು 28, 34 ಮತ್ತು 37 ವರ್ಷದವರು. ಮೂವರೂ ಶಂಕಿತ ಮಾದಕ ದ್ರವ್ಯ ವ್ಯಸನಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಾಥಮಿಕ ತನಿಖೆ ಪ್ರಕಾರ ಪ್ರತಿಭಟನೆ ಬಳಿಕ ಅಧ್ಯಕ್ಷೀಯ ಮತ್ತು ಪ್ರಧಾನಿ ನಿವಾಸದ ಬೆಲೆಬಾಳುವ ಸುಮಾರು ಸಾವಿರ ವಸ್ತುಗಳು ನಾಪತ್ತೆಯಾಗಿವೆ. ಈ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ ಎನ್ನಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.