ಕೊಲಂಬೊ: ಮಾಲ್ಡೀವ್ಸ್‌ಗೆ ಪಲಾಯನಗೈದಿರುವ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಸಂಸತ್ತಿನ ಸ್ಪೀಕರ್‌ಗೆ ದೂರವಾಣಿ ಕರೆ ಮಾಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಇಂದೇ (ಬುಧವಾರ) ಕಳುಹಿಸಲಾಗುವುದು ಎಂದು ದೂರವಾಣಿ ಮೂಲಕ ತಿಳಿಸಿದ್ದಾರೆ.
‘ಅಧ್ಯಕ್ಷರು ನನ್ನೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಇಂದು ಸ್ವೀಕರಿಸಲಾಗುವುದು. ಇದನ್ನು ಗೊಟಬಯ ಅವರೇ ಖಚಿತಪಡಿಸಿದ್ದಾರೆ’ ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜುಲೈ 20ರಂದು ನೂತನ ಅಧ್ಯಕ್ಷರ ನೇಮಕ ಮಾಡಲಾಗುವುದು. ನಾವು ರೂಪಿಸಿರುವ ಸಂಸದೀಯ ಪ್ರಕ್ರಿಯೆಯಲ್ಲಿ ವಿಶ್ವಾಸವಿಟ್ಟು ಶಾಂತಿಯುತವಾಗಿರಿ ಎಂದು ಸಾರ್ವಜನಿಕರಲ್ಲಿ ಸ್ಪೀಕರ್ ಮನವಿ ಮಾಡಿದ್ದಾರೆ.
ಗೊಟಬಯ ರಾಜಪಕ್ಸ ದೇಶವನ್ನು ತೊರೆದ ನಂತರ ಶ್ರೀಲಂಕಾದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಲಂಕೆಯಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಇದಕ್ಕೂ ಮಣಿಯದ ನಾಗರಿಕರು ಅಲ್ಲಿನ ಭದ್ರತಾ ಪಡೆಗಳ ವಿರುದ್ಧ ಕಾದಾಟಕ್ಕೆ ಇಳಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.