ADVERTISEMENT

ರಾಜಪಕ್ಸ ಕುಟುಂಬಸ್ಥರ ವಿರುದ್ದದ ಪ್ರಕರಣ ವಿಚಾರಣೆಗೆ ‘ಸುಪ್ರೀಂ’ ಸಮ್ಮತಿ

ಪಿಟಿಐ
Published 7 ಅಕ್ಟೋಬರ್ 2022, 13:55 IST
Last Updated 7 ಅಕ್ಟೋಬರ್ 2022, 13:55 IST
court
court   

ಕೊಲಂಬೊ (ಪಿಟಿಐ): ಶ್ರೀಲಂಕಾದಲ್ಲಿನ ಆರ್ಥಿಕ ಅಧಃಪತನಕ್ಕೆ ರಾಜಪಕ್ಸ ಕುಟುಂಬ ಸದಸ್ಯರೇ ಕಾರಣ ಎಂದು ಮಾನವ ಹಕ್ಕುಗಳ ಸಂಸ್ಥೆಯೊಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದು. ಈ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಶುಕ್ರವಾರ ಒಪ್ಪಿಗೆ ನೀಡಿದೆ.

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಶ್ರೀಲಂಕಾ ಎಂಬ ಸಂಸ್ಥೆಯು ಈ ಸಂಬಂಧ ಜೂನ್‌ 17ರಂದು ಪಿಐಎಲ್‌ ಸಲ್ಲಿಸಿತ್ತು.

ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಹಾಗೂ ವಿದೇಶಿ ಸಾಲದ ಹೊರೆಗೆ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ, ಅವರ ಸಹೋದರರಾದ ಮಹಿಂದಾ ರಾಜಪಕ್ಸ, ಬಸಿಲ್‌ ರಾಜಪಕ್ಸ, ಕೇಂದ್ರೀಯ ಬ್ಯಾಂಕಿನ ಮಾಜಿ ಗವರ್ನರ್ ಅಜಿತ್ ನಿವಾರ್ಡ್‌ ಕಾಬ್ರಾಲ್‌ ಹಾಗೂ ಹಣಕಾಸು ಸಚಿವಾಲಯದ ಮಾಜಿ ಅಧಿಕಾರಿ ಎಸ್‌.ಆರ್‌.ಅಟ್ಟಿಗಲ್ಲೆ ಅವರೇ ನೇರ ಹೊಣೆಗಾರರು ಎಂದು ಪಿಐಎಲ್‌ನಲ್ಲಿ ದೂರಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.