ADVERTISEMENT

ಇಂಡೋನೆಷ್ಯಾದಲ್ಲಿ ಮತ್ತೆ ಭೂಕಂಪ; 4 ದಿನದಲ್ಲಿ ಮೃತಪಟ್ಟವರ ಸಂಖ್ಯೆ 300ಕ್ಕೆ ಏರಿಕೆ

ಏಜೆನ್ಸೀಸ್
Published 9 ಆಗಸ್ಟ್ 2018, 11:44 IST
Last Updated 9 ಆಗಸ್ಟ್ 2018, 11:44 IST
ಭೂಕಂಪ ಸಂತ್ರಸ್ತ್ರರಿಗೆ ಪೂರೈಸಲು ಸೇನಾನೆಲೆಯಿಂದ ವಿಮಾನದ ಮೂಲಕ ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯಲಾಯುತು ರಾಯಿಟರ್ಸ್ ಚಿತ್ರ
ಭೂಕಂಪ ಸಂತ್ರಸ್ತ್ರರಿಗೆ ಪೂರೈಸಲು ಸೇನಾನೆಲೆಯಿಂದ ವಿಮಾನದ ಮೂಲಕ ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯಲಾಯುತು ರಾಯಿಟರ್ಸ್ ಚಿತ್ರ   

ಮಾತಾರಾಂ: ಇಂಡೋನೇಷ್ಯಾದ ಲಾಂಬೂಕ್‌ ದ್ವೀಪದಲ್ಲಿ ಗುರುವಾರ ಮತ್ತೆ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 5.9 ನಷ್ಟು ತೀವ್ರತೆ ದಾಖಲಾಗಿದೆ. ಇದರಿಂದಾಗಿಇಲ್ಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಭಾನುವಾರ ಇದೇ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಈ ವರೆಗೆ 300 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

‘ಗುರುವಾರ ಕಂಪನ ಪ್ರಬಲವಾಗಿತ್ತು. ಭಾನುವಾರದ ನಂತರ 355 ಮರುಕಂಪನಗಳು ದಾಖಲಾಗಿವೆ’ ಎಂದು ರಾಷ್ಟ್ರೀಯ ವಿಪತ್ತು ಏಜೆನ್ಸಿಯ ವಕ್ತಾರ ಸುಟೊಪೊ ಪುರ್ವೊ ನುಗ್ರಾಹೊ ಅವರು ತಿಳಿಸಿದ್ದಾರೆ.

ಭೂಕಂಪದಿಂದ ತೊಂದರೆಗೊಳಗಾದ ಜನರಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಯತ್ನಗಳು ನಡೆದಿರುವಾಗಲೇ ಮತ್ತೆ ಭೂಕಂಪನ ಸಂಭವಿಸಿರುವುದು ಇನ್ನಷ್ಟು ಆತಂಕ ಸೃಷ್ಟಿಸಿದೆ.

ADVERTISEMENT

‌ಲಾಂಬೂಕ್‌ನ ಕುಗ್ರಾಮಗಳಲ್ಲಿರುವ 20 ಸಾವಿರ ಜನರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಆದ್ಯತೆ ನೀಡಿರುವುದಾಗಿ ಇಂಡೋನೇಷ್ಯಾದ ರೆಡ್‌ಕ್ರಾಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.