ADVERTISEMENT

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ; 6.5ರಷ್ಟು ತೀವ್ರತೆ

ಏಜೆನ್ಸೀಸ್
Published 26 ಸೆಪ್ಟೆಂಬರ್ 2019, 3:12 IST
Last Updated 26 ಸೆಪ್ಟೆಂಬರ್ 2019, 3:12 IST
ಪೂರ್ವ ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನ
ಪೂರ್ವ ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನ    

ಜಕಾರ್ತ: ಇಂಡೋನೇಷ್ಯಾದಲ್ಲಿ ಗುರುವಾರ ಪ್ರಬಲ ಭೂಕಂಪನವಾಗಿದ್ದು,ರಿಕ್ಟರ್‌ ಮಾಪಕದಲ್ಲಿ 6.5ರಷ್ಟು ತೀವ್ರತೆ ದಾಖಲಾಗಿರುವುದಾಗಿ ವರದಿಯಾಗಿದೆ.

ಪೂರ್ವ ಇಂಡೋನೇಷ್ಯಾದ ಮಲುಕು ದ್ವೀಪ ಪ್ರದೇಶದಿಂದಸುಮಾರು 37 ಕಿ.ಮೀ. ವ್ಯಾಪ್ತಿಯಲ್ಲಿಪ್ರಬಲ ಭೂಕಂಪನದ ಸಂಭವಿಸಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, 29 ಕಿ.ಮೀ. ಆಳದಲ್ಲಿ ಕಂಪನವಾಗಿದೆ. ಬೆಳಿಗ್ಗೆ 8:46(ಇಂಡೋನೇಷ್ಯಾ ಸ್ಥಳೀಯ ಕಾಲಮಾನ)ಕ್ಕೆ ಸಂಭವಿಸಿರುವ ಭೂಕಂಪನದ ಪರಿಣಾಮ ಉಂಟಾಗಿರುವ ಹಾನಿ ಹಾಗೂ ಪ್ರಾಣಾಪಾಯಗಳ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ.

ಭೂಮಿ ತೀವ್ರವಾಗಿ ಕಂಪಿಸಿದ ಅನುಭವವಾಗಿದ್ದು, ಮನೆಯಲ್ಲಿದ್ದವರು ಹೊರಗೆ ಓಡಿದ್ದಾರೆ. 6.5ರಷ್ಟ್ರು ಭೂಕಂಪನದ ತೀವ್ರತೆ ದಾಖಲಾಗಿದ್ದರೂ ಸುನಾಮಿಯ ಕುರಿತು ಯಾವುದೇ ಎಚ್ಚರಿಕೆ ಪ್ರಕಟವಾಗಿಲ್ಲ.

ADVERTISEMENT

ಕಳೆದ ವರ್ಷ 7.5ರಷ್ಟು ತೀವ್ರತೆಯ ಭೂಕಂಪನದಿಂದಾಗಿ ಸುನಾಮಿ ಸೃಷ್ಟಿಯಾಗಿ ಸುಮಾರು 4,300 ಜನರು ಸಾವೀಗೀಡಾಗಿದ್ದರು. 2004ರ ಡಿಸೆಂಬರ್‌ 26ರಂದು 9.1ರಷ್ಟು ತೀವ್ರ ಭೂಕಂಪನದಿಂದ ಸುಮಾತ್ರಾ ದ್ವೀಪ ಅಲೆಗಳಿಂದ ಆವೃತವಾಗಿತ್ತು. ಅದೇ ಸಮಯದಲ್ಲಿ ಉಂಟಾದ ಸುನಾಮಿಗೆ ಸಿಲುಕಿ ಸುಮಾರು 2,20,000 ಜನ ಬಲಿಯಾದರು. ಇಂಡೋನೇಷ್ಯಾ ಒಂದರಲ್ಲೇ 1,70,000 ಮಂದಿ ಸಾವಿಗೀಡಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.