ADVERTISEMENT

ನೈಜೀರಿಯಾ | ಆತ್ಮಾಹುತಿ ಬಾಂಬ್‌ ದಾಳಿ; 10 ಮಂದಿ ಬಲಿ

ಈಶಾನ್ಯ ನೈಜೀರಿಯಾದ ರೆಸ್ಟೋರೆಂಟ್‌ ಗುರಿಯಾಗಿರಿಸಿ ದಾಳಿ

ಏಜೆನ್ಸೀಸ್
Published 21 ಜೂನ್ 2025, 14:01 IST
Last Updated 21 ಜೂನ್ 2025, 14:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಬುಜಾ: ನೈಜೀರಿಯಾ ಈಶಾನ್ಯ ಭಾಗದ ಬೊರ್ನೊ ಪ್ರಾಂತ್ಯದ ರೆಸ್ಟೋರೆಂಟ್‌ ಮೇಲೆ ಆತ್ಮಾಹುತಿ ಬಾಂಬರ್‌ ನಡೆಸಿದ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

‘ಇಲ್ಲಿನ ಕೊಂಡುಗ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಈ ದಾಳಿ ನಡೆದಿದೆ’ ಎಂದು ಪೊಲೀಸ್‌ ಇಲಾಖೆಯ ವಕ್ತಾರ ನಹುಂ ದಾಸೊ ತಿಳಿಸಿದರು.

ಯಾವುದೇ ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಈ ಭಾಗದಲ್ಲಿ ಈ ಹಿಂದೆ ಹಲವು ಸಲ ಇಸ್ಲಾಮಿಕ್‌ ಉಗ್ರಗಾಮಿ ಸಂಘಟನೆ ‘ಬೊಕೊ ಹರಾಮ್‌’ ದಾಳಿ ನಡೆಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.