ADVERTISEMENT

ಟ್ರಂಪ್‌ಗೆ ‘ಸುಪ್ರೀಂ’ನಲ್ಲಿ ಮತ್ತೊಂದು ಹಿನ್ನಡೆ

ಆದಾಯ ತೆರಿಗೆ ವಿವರ ಪರಿಶೀಲನೆ: ಸಂಸದೀಯ ಸಮಿತಿ ಹಾದಿ ಸುಗಮ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 12:36 IST
Last Updated 23 ನವೆಂಬರ್ 2022, 12:36 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಮೂರು ವರ್ಷಗಳ ಕಾನೂನು ಸಮರದ ನಂತರ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆದಾಯ ತೆರಿಗೆ ಸಲ್ಲಿಕೆ ವಿವರ ಪರಿಶೀಲನೆಯನ್ನು ಸಂಸದಿಯ ಸಮಿತಿಗೆತಕ್ಷಣ ಹಸ್ತಾಂತರಿಸುವ ಹಾದಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರಸುಗಮಗೊಳಿಸಿದೆ.

ಟ್ರಂಪ್ ಮತ್ತು ಅವರ ಕೆಲವು ವ್ಯವಹಾರಗಳಿಗೆ ಸಂಬಂಧಿಸಿದ ಆರು ವರ್ಷಗಳ ಆದಾಯ ತೆರಿಗೆ ಸಲ್ಲಿಕೆಯ ವಿವರ ಪರಿಶೀಲಿಸಲು ಡೆಮಾಕ್ರಟಿಕ್ ನಿಯಂತ್ರಿತ ಹೌಸ್ ವೇಸ್ ಮತ್ತು ಮೀನ್ಸ್‌ ಸಮಿತಿಗೆ ಸಲ್ಲಿಸುವ ಸಂಬಂಧ ಖಜಾನೆ ಇಲಾಖೆ ಹೊರಡಿಸಿರುವ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದ ಟ್ರಂಪ್‌ ಮನವಿಯನ್ನು ಕೋರ್ಟ್‌ ತಿರಸ್ಕರಿಸಿತು.

ಟ್ರಂಪ್‌ ಅವರಿಗೆ ಕೆಲವೇ ತಿಂಗಳಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಆಗಿರುವ ಎರಡನೇ ಸೋಲು ಇದು. ಈ ವರ್ಷದಲ್ಲಿ ಮೂರು ಪ್ರಕರಣಗಳಲ್ಲಿ ಟ್ರಂಪ್‌ಗೆ ಹಿನ್ನಡೆಯಾಗಿತ್ತು.

ADVERTISEMENT

ಅಧ್ಯಕ್ಷರಾಗಿದ್ದ ನಾಲ್ಕು ವರ್ಷಗಳ ಅವಧಿಯ ಆದಾಯ ತೆರಿಗೆ ಸಲ್ಲಿಕೆ ವಿವರ ಬಹಿರಂಗಪಡಿಸಲುಟ್ರಂಪ್ ಅವರು ನಿರಾಕರಿಸಿದ್ದರು. ಐಆರ್‌ಎಸ್‌ ಲೆಕ್ಕಪರಿಶೋಧನೆ ನಡೆಸುತ್ತಿದೆ ಎಂದಷ್ಟೇ ಅವರು ಹೇಳಿದ್ದರು.ಆದಾಯ ತೆರಿಗೆ ಸಲ್ಲಿಕೆಯ ದಾಖಲೆಗಳನ್ನು ಒದಗಿಸಲು ಆಗ ಅವರ ಅಧ್ಯಕ್ಷತೆಯಲ್ಲಿನ ಖಜಾನೆ ಇಲಾಖೆ ನಿರಾಕರಿಸಿತ್ತು.ಆದರೆ, ಅಧ್ಯಕ್ಷರು ಸೇರಿ ಯಾವುದೇ ತೆರಿಗೆದಾರರ ಆದಾಯ ತೆರಿಗೆ ಸಲ್ಲಿಕೆ ವಿವರ ಪರಿಶೀಲಿಸುವ ಹಕ್ಕು ಸಂಸದೀಯ ಸಮಿತಿಗೆ ಇದೆ. ಇದನ್ನು ಫೆಡರಲ್ ಕಾನೂನು ಕೂಡ ಸ್ಪಷ್ಟಪಡಿಸಿದೆ ಎಂದು ಅಧ್ಯಕ್ಷ ಜೋ ಬೈಡನ್‌ ಅವರ ಆಡಳಿತ ಹೇಳಿದೆ.

ಕಳೆದ ವಾರ ಟ್ರಂಪ್ ಅವರು 2024ರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.