ADVERTISEMENT

ಸ್ವೀಡನ್: ಮೊದಲ ಮಹಿಳಾ ಪ್ರಧಾನಿ ನೇಮಕಕ್ಕೆ ಒಪ್ಪಿಗೆ

ಏಜೆನ್ಸೀಸ್
Published 24 ನವೆಂಬರ್ 2021, 10:30 IST
Last Updated 24 ನವೆಂಬರ್ 2021, 10:30 IST
ಮ್ಯಾಗ್ಡಲೇನಾ ಆ್ಯಂಡೆರ್ಸನ್
ಮ್ಯಾಗ್ಡಲೇನಾ ಆ್ಯಂಡೆರ್ಸನ್   

ಕೋಪನ್‌ಹೇಗನ್: ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ನಾಯಕಿ, ಹಣಕಾಸು ಸಚಿವೆ ಮ್ಯಾಗ್ಡಲೇನಾ ಆ್ಯಂಡರ್ಸನ್ ಅವರನ್ನು ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ನೇಮಕ ಮಾಡಲು ಅಲ್ಲಿನ ಸಂಸತ್ತು ಬುಧವಾರ ಅನುಮೋದನೆ ನೀಡಿದೆ.

ಹೊಸ ಸರ್ಕಾರ ರಚನೆಯಾಗುವವರೆಗೂ ಹಾಲಿ ಪ್ರಧಾನಿ ಸ್ಟೀಫನ್ ಲೋಫ್ವೆನ್ ಸರ್ಕಾರವನ್ನು ಮುನ್ನಡೆಸಲಿದ್ದಾರೆ.

ಈ ಬೆಳವಣಿಗೆಯು ಸ್ವೀಡನ್‌ನಲ್ಲಿ ಒಂದು ಮೈಲಿಗಲ್ಲು ಎನ್ನಲಾಗಿದೆ. ಲಿಂಗಸಂಬಂಧಿ ವಿಚಾರಗಳಲ್ಲಿ ಯುರೋಪಿನ ಅತ್ಯಂತ ಪ್ರಗತಿಪರ ರಾಷ್ಟ್ರಗಳಲ್ಲಿ ಒಂದಾಗಿರುವ ಸ್ವೀಡನ್‌ನಲ್ಲಿ ಇದುವರೆಗೆ ರಾಜಕೀಯದ ಉನ್ನತ ಹುದ್ದೆಯಲ್ಲಿ ಮಹಿಳೆಯರಿಗೆ ಸ್ಥಾನ ದೊರೆತಿರಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.