ADVERTISEMENT

ಸ್ವೀಡನ್‌ ಪ್ರಧಾನಿ ಸ್ಟೀಫನ್‌ ಲೋಫ್ವೆನ್ ಸ್ಥಾನ ಅಭದ್ರ

ರಾಯಿಟರ್ಸ್
Published 21 ಜೂನ್ 2021, 8:31 IST
Last Updated 21 ಜೂನ್ 2021, 8:31 IST
ಸ್ಟೀಫನ್ ಲೋಫ್ವೆನ್
ಸ್ಟೀಫನ್ ಲೋಫ್ವೆನ್   

ಸ್ಟಾಕ್‌ಹೋಮ್‌:‌ ಸ್ವೀಡನ್‌ ಪ್ರಧಾನಿ ಸ್ಟೀಫನ್ ಲೋಫ್ವೆನ್ ನೇತೃತ್ವದ ಸರ್ಕಾರವು ಎಡಪಕ್ಷದ ಬೆಂಬಲವನ್ನು ಮರಳಿ ಪಡೆಯುವಲ್ಲಿ ವಿಫಲವಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ಅವರು ಸಂಸತ್ತಿನಲ್ಲಿ ಸೋಮವಾರ ವಿಶ್ವಾಸ ಮತಯಾಚನೆಗೆ ಮುಂದಾಗಿದ್ದಾರೆ.

ಸ್ಟೀಫನ್ ಲೋಫ್ವೆನ್ ಅವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾಗುವ ಸಾಧ್ಯತೆಗಳಿವೆ. ಸ್ವೀಡನ್‌ ಇತಿಹಾಸದಲ್ಲಿ ಮೊದಲ ಬಾರಿ ಪ್ರಧಾನಿ ಪದಚ್ಯುತಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಸ್ಟೀಫನ್‌ ಅವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾದರೆ ಒಂದು ವಾರದೊಳಗೆ ಚುನಾವಣೆ ಘೋಷಿಸಬೇಕು ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. 1958ರ ಬಳಿಕ ಸ್ವೀಡನ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ ಈ ರೀತಿಯ ರಾಜಕೀಯ ಬೆಳವಣಿಗೆಗಳಾಗಿವೆ.

ADVERTISEMENT

2018ರಲ್ಲಿ ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸ್ಟೀಫನ್‌ ಅವರು ಸೋಷಿಯಲ್‌ ಡೆಮಾಕ್ರಾಟ್ಸ್‌, ಗ್ರೀನ್ಸ್‌, ಸೆಂಟರ್‌ ಪಾರ್ಟಿ ಮತ್ತು ಲಿಬರಲ್ಸ್‌ ಪಾರ್ಟಿಯನ್ನೊಳಗೊಂಡ ಸರ್ಕಾರ ಮುಂದಾಳತ್ವವನ್ನು ವಹಿಸಿದ್ದರು. ಹೊಸದಾಗಿ ನಿರ್ಮಿಸಲಾಗಿರುವ ವಸತಿ ಸಮುಚ್ಛಯಗಳ ಬಾಡಿಗೆ ನಿಯಂತ್ರಣವನ್ನು ಸರಳಗೊಳಿಸುವ ಸರ್ಕಾರದ ನಡೆಯನ್ನು ಎಡಪಕ್ಷಗಳು ವಿರೋಧಿಸಿದ್ದೇ ಈ ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ. ಆದರೆ ಇದರಿಂದ ದೇಶದ ಆರ್ಥಿಕ ಕ್ಷೇತ್ರಕ್ಕೆ ಯಾವುದೇ ತೊಂದರೆ ಉಂಟಾಗದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.