ADVERTISEMENT

ಸ್ವಿಟ್ಜರ್ಲೆಂಡ್‌ನಲ್ಲಿದೆ ವಿಶ್ವದ ಚಿಕ್ಕ ಚಿನ್ನದ ನಾಣ್ಯ!

ಏಜೆನ್ಸೀಸ್
Published 23 ಜನವರಿ 2020, 19:45 IST
Last Updated 23 ಜನವರಿ 2020, 19:45 IST
ನಾಣ್ಯ
ನಾಣ್ಯ   

ಬರ್ಲಿನ್: ಸ್ವಿಟ್ಜರ್ಲೆಂಡ್‌ನಲ್ಲಿ ಅತಿ ಚಿಕ್ಕದಾದ ಚಿನ್ನದ ನಾಣ್ಯ ಬಿಡುಗಡೆ ಮಾಡಲಾಗಿದೆ. ಭೌತವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌ ಅವರ ಚಿತ್ರ ಇದರಲ್ಲಿದೆ. ಅತಿ ಸಮೀಪದಿಂದ ನೋಡಿದರಷ್ಟೆ ಈ ಚಿತ್ರ ಕಾಣುತ್ತದೆ.

ನಾಣ್ಯ 2.96 ಮಿ.ಮೀ. ಸುತ್ತಳತೆ ಹೊಂದಿದ್ದು, ಜಗತ್ತಿನಲ್ಲಿಯೇ ಅತಿ ಚಿಕ್ಕ ನಾಣ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ನೋಟು ಮುದ್ರಣ ಘಟಕ ಸ್ವಿಸ್‌ಮಿಂಟ್‌ ತಿಳಿಸಿದೆ.

ನಾಣ್ಯ ಕೇವಲ 0.063 ಗ್ರಾಂ ತೂಕವಿದೆ. ಇದರ ಮೌಲ್ಯ ಸ್ವಿಟ್ಜರ್ಲೆಂಡ್‌ನ 0.25 ಸ್ವಿಸ್ ಫ್ರಾಂಕ್‌ (₹18.55). ಕೇವಲ 999 ನಾಣ್ಯಗಳನ್ನು ಮಾತ್ರ ಟಂಕಿಸಲಾಗಿದ್ದು,199 ಫ್ರಾಂಕ್‌ಗಳಿಗೆ ಮಾರಲಾಗುವುದು ಎಂದು ಸ್ವಿಸ್‌ಮಿಂಟ್‌ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.