ಸಾಂದರ್ಭಿಕ ಚಿತ್ರ
ಡಮಾಸ್ಕಸ್ : ಬಶರ್ ಅಸಾದ್ ಸರ್ಕಾರ ಪತನಗೊಂಡ ಬೆನ್ನಲ್ಲೇ ಇಸ್ರೇಲ್ ಸೇನೆಯು ಡಮಾಸ್ಕಸ್‌ನ ಭದ್ರತಾ ಸಂಕೀರ್ಣವನ್ನು ಗುರಿಯಾಗಿಸಿ ವಾಯು ದಾಳಿ ನಡೆಸಿದೆ.
‘ಸೇನೆಯ ಕೇಂದ್ರ ಕಚೇರಿ, ಗುಪ್ತಚರ ಸಂಸ್ಥೆ ಮತ್ತು ಕಸ್ಟಮ್ಸ್‌ನ ಕಚೇರಿಗಳನ್ನು ಒಳಗೊಂಡ ಕಟ್ಟಡದ ಮೇಲೆ ದಾಳಿ ನಡೆದಿದೆ’ ಎಂದು ಸಿರಿಯಾದಲ್ಲಿನ ಬ್ರಿಟನ್ ಮೂಲದ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ಇರಾನ್‌ನ ವಿಜ್ಞಾನಿಗಳು ಇದೇ ಸಂಕೀರ್ಣದಲ್ಲಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದರು ಎಂದು ಇಸ್ರೇಲ್ ಈ ಹಿಂದೆ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.