ADVERTISEMENT

ಸಿರಿಯಾ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 5 ಸಾವು

ಏಜೆನ್ಸೀಸ್
Published 19 ಫೆಬ್ರುವರಿ 2023, 14:17 IST
Last Updated 19 ಫೆಬ್ರುವರಿ 2023, 14:17 IST
ಭಾನುವಾರ ಮುಂಜಾನೆ ಸಿರಿಯಾ ರಾಜಧಾನಿ ಡಮಾಸ್ಕಸ್‌ನ ವಸತಿ ಪ್ರದೇಶದ ಮೇಲೆ ನಡೆದ ಇಸ್ರೇಲ್‌ ವೈಮಾನಿಕ ದಾಳಿಗೆ ಧ್ವಂಸಗೊಂಡಿರುವ ಕಟ್ಟಡ.   
ಭಾನುವಾರ ಮುಂಜಾನೆ ಸಿರಿಯಾ ರಾಜಧಾನಿ ಡಮಾಸ್ಕಸ್‌ನ ವಸತಿ ಪ್ರದೇಶದ ಮೇಲೆ ನಡೆದ ಇಸ್ರೇಲ್‌ ವೈಮಾನಿಕ ದಾಳಿಗೆ ಧ್ವಂಸಗೊಂಡಿರುವ ಕಟ್ಟಡ.      

ಡಮಾಸ್ಕಸ್‌, ಸಿರಿಯಾ (ಎಪಿ): ಸಿರಿಯಾದ ರಾಜಧಾನಿ ಡಮಾಸ್ಕಸ್‌ನ ವಸತಿ ಪ್ರದೇಶವನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಭಾನುವಾರ ಬೆಳಿಗ್ಗೆ ವೈಮಾನಿಕ ದಾಳಿ ನಡೆಸಿದ್ದು, ಐದು ಮಂದಿ ಮೃತಪಟ್ಟಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ.

ಸತ್ತವರಲ್ಲಿ ಒಬ್ಬ ಯೋಧರೂ ಸೇರಿದ್ದಾರೆ. ಹಲವು ಕಟ್ಟಡಗಳು ಧ್ವಂಸಗೊಂಡಿವೆ ಎಂದು ಸರ್ಕಾರಿ ಸ್ವಾಮ್ಯದ ’ಸಾನಾ‘ ಸುದ್ದಿಸಂಸ್ಥೆ ತಿಳಿಸಿದೆ.

ಸಿರಿಯಾ ಮೇಲೆ ಇಸ್ರೇಲ್ ಪದೇ ಪದೇ ದಾಳಿ ನಡೆಸುತ್ತಿದ್ದು, ಇದೇ 6ರಂದು ಸಂಭವಿಸಿದ ಭೀಕರ ಭೂಕಂಪದ ಬಳಿಕ ಸಿರಿಯಾ ಮೇಲೆ ಇಸ್ರೇಲ್ ನಡೆಸಿರುವ ಪ್ರಥಮ ವೈಮಾನಿಕ ದಾಳಿ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.