ADVERTISEMENT

ಮಹಿಳೆಯರೂ ಸರ್ಕಾರದಲ್ಲಿ ಭಾಗಿಯಾಗಬೇಕು: ತಾಲಿಬಾನ್‌

ಏಜೆನ್ಸೀಸ್
Published 17 ಆಗಸ್ಟ್ 2021, 9:25 IST
Last Updated 17 ಆಗಸ್ಟ್ 2021, 9:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದ ಎಲ್ಲರಿಗೂ ತಾಲಿಬಾನ್‌ ಕ್ಷಮಾದಾನ ಘೋಷಿಸಿದ್ದು, ಮಹಿಳೆಯರೂ ತನ್ನ ಸರ್ಕಾರದಲ್ಲಿ ಭಾಗಿಯಾಗಬೇಕು ಎಂದು ತಾಲಿಬಾನ್‌ ಅಧಿಕಾರಿಯೊಬ್ಬರು ಒತ್ತಾಯಿಸಿದ್ದಾರೆ.

ಅಫ್ಗಾನಿಸ್ತಾನದ ಸರ್ಕಾರಿ ಸ್ವಾಮ್ಯದ ದೂರದರ್ಶನ ವಾಹಿನಿಯಲ್ಲಿಇಸ್ಲಾಮಿಕ್ ಎಮಿರೇಟ್‌ನ ಸಾಂಸ್ಕೃತಿಕ ಆಯೋಗದ ಸದಸ್ಯ ಎನಾಮುಲ್ಲಾ ಸಮಂಗಾನಿ ಈ ಹೇಳಿಕೆ ನೀಡಿದ್ದಾರೆ. ದೂರದರ್ಶನ ವಾಹಿನಿಯು ಉಗ್ರರ ಹಿಡಿತದಲ್ಲಿದೆ.

ಈ ಬೆಳವಣಿಗೆಯಿಂದ ಮಹಿಳೆಯರು ತೊಂದರೆಗೆ ಒಳಗಾಗುವುದನ್ನು ಇಸ್ಲಾಮಿಕ್ ಎಮಿರೇಟ್ಸ್‌ ಬಯಸುವುದಿಲ್ಲ ಎಂದು ಅವರು ತಿಳಿಸಿದರು.

ADVERTISEMENT

‘ಸರ್ಕಾರ ಯಾವ ರೀತಿ ಇರಲಿದೆ. ಅದರ ರಚನೆ ಹೇಗಿರುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ. ಆದರೆ ಅನುಭವದ ಆಧಾರದ ಮೇಲೆ, ಸಂಪೂರ್ಣ ಇಸ್ಲಾಮಿಕ್ ನಾಯಕತ್ವ ಇರಬೇಕು ಮತ್ತು ಈ ಸರ್ಕಾರದಲ್ಲಿ ಎಲ್ಲ ವರ್ಗಗಳೂ ಭಾಗಿಯಾಗಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.