ADVERTISEMENT

ತಾಲಿಬಾನ್‌ ಆಡಳಿತ ಟೀಕಿಸುತ್ತಿದ್ದ ಆಫ್ಗನ್‌ ಪ್ರೊಫೆಸರ್‌ ಬಂಧನ

ಏಜೆನ್ಸೀಸ್
Published 9 ಜನವರಿ 2022, 12:13 IST
Last Updated 9 ಜನವರಿ 2022, 12:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಬೂಲ್‌ (ಎಪಿ): ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಹಾಗೂ ಹಿಂದಿನ ಆಡಳಿತಗಳ ವಿರುದ್ಧ ಬಹಿರಂಗ ಟೀಕೆ ಮಾಡುತ್ತಿದ್ದ ಕಾಬೂಲ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಫೈಜುಲ್ಲಾ ಜಲಾಲ್‌ ಎಂಬುವವರನ್ನು ಬಂಧಿಸಲಾಗಿದೆ ಎಂದು ತಾಲಿಬಾನ್‌ ವಕ್ತಾರ ಝಬಿಹುಲ್ಲಾ ಮುಜಾಹಿದ್‌ ಭಾನುವಾರ ತಿಳಿಸಿದ್ದಾರೆ.

‘ತಾಲಿಬಾನ್‌ ಗುಪ್ತಚರ ವಿಭಾಗವು ಪ್ರೊಫೆಸರ್‌ ಜಲಾಲ್‌ ಅವರನ್ನು ಬಂಧಿಸಿದೆ. ಪ್ರೊಫೆಸರ್‌ ಅವರು ತಾಲಿಬಾನ್‌ ಸರ್ಕಾರದ ವಿರುದ್ಧ ಜನರನ್ನು ಪ್ರಚೋದಿಸುವ, ಸರ್ಕಾರದ ಘನತೆಯನ್ನು ಕುಂದಿಸುವ ಅಸಂಬದ್ಧ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೀಡುತ್ತಿದ್ದರು’ ಎಂದು ಮುಜಾಹಿದ್‌ ಟ್ವೀಟ್‌ವೊಂದರಲ್ಲಿ ಹೇಳಿದ್ದಾರೆ.

ಜಲಾಲ್‌ ಅವರು 2004ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಮೀದ್ ಕರ್ಜೈ ಅವರ ವಿರುದ್ಧ ಸ್ಪರ್ಧಿಸಿದ್ದ ಮಸೂದಾ ಜಲಾಲ್‌ ಅವರ ಪತಿ. ತನ್ನ ತಂದೆಯನ್ನು ಬಿಡುಗಡೆ ಮಾಡುವಂತೆ ಜಲಾಲ್‌ ಅವರ ಪುತ್ರಿ ಹಸೀನಾ ಜಲಾಲ್‌ ಟ್ವೀಟ್‌ ಮಾಡಿ ಒತ್ತಾಯಿಸಿದ್ದಾರೆ.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.