ADVERTISEMENT

ಅಫ್ಗಾನ್‌: ಸಾರ್ವಜನಿಕವಾಗಿ ಗಲ್ಲು ಶಿಕ್ಷೆಗೆ ಗುರಿಪಡಿಸಿದ ತಾಲಿಬಾನ್

ಏಜೆನ್ಸೀಸ್
Published 7 ಡಿಸೆಂಬರ್ 2022, 15:05 IST
Last Updated 7 ಡಿಸೆಂಬರ್ 2022, 15:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್‌: ಅಫ್ಗಾನಿಸ್ತಾನದಲ್ಲಿ ವ್ಯಕ್ತಿಯ ಕೊಲೆ ಮಾಡಿದ ಅಪರಾಧಿಯನ್ನು ಸಾರ್ವಜನಿಕವಾಗಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ.

ತಾಲಿಬಾನ್‌ ಬಂಡುಕೋರರು ಕಳೆದ ವರ್ಷ ದೇಶದ ಆಡಳಿತ ಚುಕ್ಕಾಣಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ನಂತರ ಇದೇ ಮೊದಲ ಬಾರಿಗೆ ಅಪರಾಧಿಯೊಬ್ಬನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ ಎಂದು ವಕ್ತಾರ ಹೇಳಿದ್ದಾರೆ.

ಹೆರಾತ್ ಪ್ರಾಂತ್ಯದ ತಾಜ್ಮಿರ್ ಮರಣದಂಡನೆಗೊಳಗಾದ ವ್ಯಕ್ತಿ. ಐದು ವರ್ಷಗಳ ಹಿಂದೆಫರಾಹ್ ಪ್ರಾಂತ್ಯದ ಮುಸ್ತಫಾ ಎಂಬ ವ್ಯಕ್ತಿಯನ್ನು ಕೊಂದು ಆತನ ಬೈಕ್‌ ಮತ್ತು ಮೊಬೈಲ್ ಫೋನ್ ಕದ್ದಿದ್ದಕ್ಕಾಗಿ ತಾಜ್ಮಿರ್‌ನನ್ನು ಗಲ್ಲಿಗೇರಿಸಲಾಗಿದೆ.

ADVERTISEMENT

‘ಫರಾಹ್‌ ಪ್ರಾಂತ್ಯದಲ್ಲಿ ತಾಲಿಬಾನ್‌ನ ಅಧಿಕಾರಿಗಳು ಹಾಗೂ ನೂರಾರು ಜನರ ಸಮ್ಮುಖದಲ್ಲಿ ತಾಜ್ಮರ್‌ನನ್ನು ಗಲ್ಲಿಗೇರಿಸಲಾಯಿತು’ ಎಂದು ತಾಲಿಬಾನ್‌ ಸರ್ಕಾರದ ವಕ್ತಾರ ಜಬೀಹುಲ್ಲಾ ಮುಜಾಹಿದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.